ಮಂಗಳವಾರ, ಮೇ 11, 2021
19 °C

ಬಿಂದೇಶ್ವರ್ ಪಾಠಕ್‌ಗೆ ಫ್ರಾನ್ಸ್ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಸಾಮಾಜಿಕ ಸೇವಾ ಸಂಘಟನೆ `ಸುಲಭ್ ಇಂಟರ್‌ನ್ಯಾಷನಲ್' ಸ್ಥಾಪಕ ಹಾಗೂ ಪರಿಸರವಾದಿ ಬಿಂದೇಶ್ವರ್ ಪಾಠಕ್ ಅವರಿಗೆ ಪ್ಯಾರಿಸ್‌ನಲ್ಲಿ `ಲೆಜೆಂಡ್ ಆಫ್  ಪ್ಲಾನೆಟ್' ಪುರಸ್ಕಾರ ನೀಡಿ ಗೌರವಿಸಲಾಗಿದೆ.ಭಾರತದಲ್ಲಿನ ಬಡವರಿಗೆ ಕಡಿಮೆ ವೆಚ್ಚದಲ್ಲಿ ಶೌಚಾಲಯ ಸೌಲಭ್ಯ ದೊರೆಯುವಂತಾಗಲು  `ಸುಲಭ್ ಇಂಟರ್‌ನ್ಯಾಷನಲ್' ಶ್ರಮಿಸುತ್ತಿದೆ.ಪ್ಯಾರಿಸ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಫ್ರೆಂಚ್ ಸೆನೆಟ್ ಉಪಾಧ್ಯಕ್ಷೆ ಛಂತಾಲ್ ಜೋರ್ಡಾನ್, ಪಾಠಕ್ ಅವರಿಗೆ ಪುರಸ್ಕಾರ ನೀಡಿದರು.ನೈರ್ಮಲೀಕರಣದ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆ, ಸಾಮಾಜಿಕ ಪ್ರಗತಿ ಹಾಗೂ ಮಾನವ ಹಕ್ಕುಗಳ ರಕ್ಷಣೆ ಮುಂತಾದ ಸೇವೆಗಳಿಗೆ ಪಾಠಕ್ ಅವರನ್ನು ವಿಶ್ವದಾದ್ಯಂತ ಗುರುತಿಸಲಾಗುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕಡಿಮೆ ಹಾಗೂ ಪರಿಸರ ಸ್ನೇಹಿ ಶೌಚಾಲಯ ತಂತ್ರಜ್ಞಾನ ಮೂಲಕ ಭಾರತದಲ್ಲಿ `ಶೌಚಾಲಯ ಕ್ರಾಂತಿ'ಯಾಗಬೇಕು ಎಂದು ಪಾಠಕ್ `ಸುಲಭ್ ಇಂಟರ್‌ನ್ಯಾಷನಲ್' ಸ್ಥಾಪಿಸಿದ್ದರು.`ಪರಿಸರ ರಕ್ಷಣೆ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳಿಗೆ ಗುರುತಿಸಿ ನೀಡುವ ಈ ಪುರಸ್ಕಾರ ಗೌರವ ತಂದಿದೆ. ಇದರಿಂದ ಇನ್ನಷ್ಟು ಕೆಲಸ ಮಾಡುವ ಶಕ್ತಿ ಬಂದಿದೆ' ಎಂದು ಪಾಠಕ್ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.