ಬಿಂಬ

7

ಬಿಂಬ

Published:
Updated:

ನೋಡಿದರೇ ಗೊತ್ತಾಗುತ್ತೆ, ಅವನಿಗೆ

ಪ್ರಚಂಡ ಸಿಟ್ಟು ಬಂದಿದೆ!

ಷಂಡ ಸಿಟ್ಟು!

 

ಏನು ಮಾಡಿದರೂ ಮಾಡಿದನೇ, ಅಗೋ

ಇಂದಿನ ವರ್ತಮಾನ

ಪತ್ರಿಕೆ ಪರಪರ ಹರಿದ;

ತನ್ನ ಮೊಬೈಲ್ ತಗೊಂಡ;

ಮುಷ್ಟಿ ಬಿಗಿ ಹಿಡಿದು,

`ಥೂ, ನಿನ್ನ ಜನ್ಮಕ್ಕೆ!~ ಎಂದುಗಿದು,

ನನ್ನತ್ತ ಬೀಸಿ ಒಗೆದ.

 

ಠಳ್ಳೆಂದು

ನಿಲುವುಗನ್ನಡಿ ನುಚ್ಚುನೂರು!

ಆದರೆ, ಪಾಪ, ಹೇಗಾದಾನು

ನನ್ನಿಂದ ಪಾರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry