ಸೋಮವಾರ, ಜೂನ್ 21, 2021
29 °C

ಬಿಂಬ –ಪ್ರತಿಬಿಂಬ

ವೈ. ರಾಮಕೃಷ್ಣ,ಬೆಂಗಳೂರು Updated:

ಅಕ್ಷರ ಗಾತ್ರ : | |

ಮೋದಿ ಆಡಳಿತದಲ್ಲಿ  ಗುಜರಾತಿನಲ್ಲಿ ನರ ಮೇಧ ನಡೆಯಿತು ಎಂದರೆ ತಕ್ಷಣವೇ ರಾಜೀವ್ ಗಾಂಧಿ ಆಳುವಾಗ ದೆಹಲಿಯಲ್ಲೂ ಅದೇ ಆಯಿತಲ್ಲ ಎನ್ನುತ್ತಾರೆ. ಯಡಿಯೂರಪ್ಪ ಭ್ರಷ್ಟಾ ಚಾರದ ಆರೋಪ ಹೊತ್ತಿದ್ದಾರೆ ಎಂದರೆ ನಿಮ್ಮದು 2ಜಿ ಹಗರಣವಿದೆಯಲ್ಲಾ ಎನ್ನುತ್ತಾರೆ.

ಒಟ್ಟಿನಲ್ಲಿ ಬಿಜೆಪಿ ಹಗರಣಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಗರಣವಿದೆ.ಆದರೆ ಇಬ್ಬರೂ ನಮಗೇ ವೋಟು ಕೊಡಿ ಎನ್ನುತ್ತಿದ್ದಾರೆ. ಒಬ್ಬರು ಭಾರತ ನಿರ್ಮಾಣದ ಭರವಸೆ ನೀಡಿದರೆ ಮತ್ತೊಬ್ಬರು ಬಲಿಷ್ಠ ಭಾರತದ ಭರವಸೆ ಕೊಡುತ್ತಿದ್ದಾರೆ. ಇದೆಲ್ಲಾ ಸರಿ, ಈ ಎರಡರಲ್ಲಿ ಯಾವುದು ಸಾಧ್ಯವಾದರೂ ನಷ್ಟವಾಗುವುದು ಮತದಾರ ಮಹಾಪ್ರಭುವಿಗೇ ಎಂಬುದರಲ್ಲಿ ಸಂಶಯವಿಲ್ಲ. ಈಗ 2ಜಿ ಹಗರಣವನ್ನು ವಿರೋಧಿಸುತ್ತಿರುವವರು ನಾಳೆ ಬಂದು 4ಜಿ ಹಗರಣ ಮಾಡಿ 'ಅವರು 2ಜಿ ಮಾಡಿರ ಲಿಲ್ಲವೇ?' ಎಂದರೆ ಏನು ಮಾಡುವುದು.ಒಂದು ಮತ್ತೊಂದರ ಪ್ರತಿಬಿಂಬದಂತೆ ಕಾಣಿ ಸುತ್ತಿರುವ ಈ ಎರಡೂ ಪಕ್ಷಗಳ ಸುತ್ತ ಚರ್ಚೆ ಮಾಡುವುದನ್ನು ಬಿಟ್ಟು ಪರ್ಯಾಯಗಳನ್ನು ಆಲೋಚಿಸುವುದೇ ಉತ್ತಮ ಎನಿಸುತ್ತದೆ. ಈ ಪರ್ಯಾಯಗಳು ಈ ಕ್ಷಣಕ್ಕೆ ಎಷ್ಟೇ ಬಾಲಿಶ ವೆಂಬಂತೆ ಕಾಣಿಸುತ್ತಿದ್ದರೂ ಅನುಭವಿ ದುಷ್ಟರಿ ಗಿಂತ ಅನನಭವಿ ಉತ್ಸಾಹಿಗಳೇ ಉತ್ತಮ ವಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.