ಬಿಇಎಂಎಲ್ಗೆ ವಿಜಯ
ಬೆಂಗಳೂರು: ಬಿಇಎಂಎಲ್ ತಂಡ ಇಲ್ಲಿ ನಡೆಯುತ್ತಿರುವ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 3-1ಗೋಲುಗಳಿಂದ ಹುಬ್ಬಳ್ಳಿಯ ಎಸ್ಡಬ್ಲ್ಯುಆರ್ ತಂಡವನ್ನು ಮಣಿಸಿತು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ರಮೇಶ್ 8 ಹಾಗೂ 24ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ, ಇನ್ನೊಂದು ಗೋಲನ್ನು ಕಲ್ಲಪ್ಪ 59ನೇ ಗೋಲು ತಂದಿ್ತರು. ಎಸ್ಎಐ `ಬಿ~ ಹಾಗೂ ಡಿವೈಎಸ್ಎಸ್ ತಂಡಗಳ ನಡುವಿನ ಪಂದ್ಯವು 1-1ಗೋಲುಗಳಿಂದ ಡ್ರಾ ಆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.