ಶುಕ್ರವಾರ, ಮೇ 29, 2020
27 °C

ಬಿ.ಇಡಿ : ಕ್ಲಸ್ಟರ್ ಪದ್ಧತಿ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿ.ಇಡಿ ಪರೀಕ್ಷಾ ಕೇಂದ್ರಗಳನ್ನು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ರಮವನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಬುಧವಾರ ಪ್ರತಿಭಟನೆ ನಡೆಸಿತು. ಈ ಕುರಿತು ಗುಲ್ಬರ್ಗ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದ ಫೆಡರೇಷನ್,  ಬಿ.ಇಡಿ ಪರೀಕ್ಷೆಗಳು ಹಿಂದೆ  ಆಯಾ ತಾಲ್ಲೂಕು ಮಟ್ಟದಲ್ಲಿಯೆ ನಡೆಯುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ತಾಲ್ಲೂಕಿನಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ  ಹಳ್ಳಿಗಳಿಂದ ಬರುವ  ಬಡ ವಿದ್ಯಾರ್ಥಿಗಳು  ಮನೆಯಿಂದ ಊಟ ತೆಗೆದುಕೊಂಡು ಬಂದು ಪರೀಕ್ಷೆಗೆ ಹಾಜರಾಗುತ್ತಿದ್ದರು. ಸ್ಥಳಿಯವಾಗಿ ವ್ಯಾಸಂಗಕ್ಕೆಂದು ಹಿಡಿದಿರುವ ತಮ್ಮ ಕೊಠಡಿಗಳಲ್ಲಿ ಮನೆಪಾಠ ಹಾಗೂ ಹೆಚ್ಚಿನ ಅಭ್ಯಾಸ ಮಾಡಲು ಬೇಕಾಗುವ ಸಂಪನ್ಮೂಲಗಳು ಲಭ್ಯವಾಗುತ್ತಿದ್ದವು.ಈ ಆದೇಶದಿಂದಾಗಿ ವಿದ್ಯಾರ್ಥಿಗಳಿಗೆ ಅರ್ಥಿಕ ಬಿಕ್ಕಟ್ಟು ಎದುರಿಸುವುದರ ಜೊತೆಗೆ ಪರೀಕ್ಷೆ ಮುಗಿಯುವವರೆಗೆ ಜಿಲ್ಲಾ ಕೇಂದ್ರದಲ್ಲಿ ಊಟ ಮತ್ತು ವಸತಿ ಸಮಸ್ಯೆಗಳು ಎದುರಾಗುತ್ತವೆ.ದಿನಾಲೂ ತಮ್ಮ ಸ್ವಸ್ಥಾನಕ್ಕೆ ಹೋಗಿ ಬರುವುದಾದರೆ ಪರೀಕ್ಷೆಯ ಸಂದರ್ಭದಲ್ಲಿ ತೀವ್ರ ತೊಂದರೆಯಾಗಿ  ಫಲಿಂತಾಶದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತದೆ. ಆದ್ದರಿಂದ ಆಯಾ ತಾಲ್ಲೂಕು ಮಟ್ಟದಲ್ಲಿಯೇ ಪರೀಕ್ಷೆಗಳು ನಡೆಸುವುದರಿಂದ ಈ ಸಮಸ್ಯೆಗಳು ಉದ್ಬವಿಸುವುದಿಲ್ಲ.ಬಡವಿದ್ಯಾರ್ಥಿಗಳು  ತೀವ್ರ ಅರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ವಿಶ್ವವಿದ್ಯಾಲಯದ ಈ ಆದೇಶದಿಂದಾಗಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.  ಕ್ಲಸ್ಟರ್ ಪದ್ದತಿಯನ್ನು ಕೂಡಲೇ ರದ್ದು ಮಾಡಿ ಮೊದಲಿನಂತೆ ತಾಲ್ಲೂಕು ಮಟ್ಟದಲ್ಲಿ ಬಿ.ಇಡಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಮಾನ್ಪಡೆ ಒತ್ತಾಯಿಸಿದ್ದಾರೆ.

ಪ್ರಕಾಶ ಆಲ್ಹಾಳ, ದೀಲೀಪ ನಾಗೂರ, ಬಾಬುರಾವ ಕಟ್ಟಿಮನಿ, ಆಕಾಶ ನಾಲ್ಕಮನಿ ಹಾಗೂ ಬಿ.ಇಡಿ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.