ಮಂಗಳವಾರ, ಮಾರ್ಚ್ 2, 2021
29 °C

ಬಿಎಂಎಸ್‌ ಕಾಲೇಜಿನಲ್ಲಿ ಕಂಪ್ಯೂಟಿಂಗ್ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಎಸ್‌ ಕಾಲೇಜಿನಲ್ಲಿ ಕಂಪ್ಯೂಟಿಂಗ್ ಸಮಾವೇಶ

ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಇತ್ತೀಚೆಗೆ ಐಇಇಇ–ಇಂಟರ್‌ನ್ಯಾಷನಲ್ ಅಡ್ವಾನ್ಸ್ ಕಂಪ್ಯೂಟಿಂಗ್ ಸಮಾವೇಶದ ೫ನೇ ಆವೃತ್ತಿಯನ್ನು ಆಯೋಜಿಸಿತ್ತು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಹೊಂದಿದ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಜ್ಞಾನ ವಿಸ್ತರಣೆಗೆ ಈ ಸಮಾವೇಶವು ಒತ್ತು ನೀಡಿತು. ಜೊತೆಗೆ ‘ಅಡ್ವಾನ್ಸ್ಡ್ ಕಂಪ್ಯೂಟಿಂಗ್’ ಕ್ಷೇತ್ರದಲ್ಲಿನ ಪ್ರಗತಿ ಹಾಗೂ ಇತ್ತೀಚಿನ ಹೊಸ ಶೋಧನೆಗಳ ಪ್ರಗತಿಯ ಕಡೆ ಹೆಚ್ಚಿನ ಗಮನ ನೀಡಿತ್ತು. ಈ ಸಮಾವೇಶದ ಪ್ರಾಯೋಜತ್ವಕವನ್ನು ವಹಿಸಿಕೊಂಡ ಕೈಗಾರಿಕೆಗಳ ಪೈಕಿ, ಎಕ್ಸ್‌ಟ್ರೀಮ್ ನೆಟ್‌ವರ್ಕ್ಸ್, ರಕಸ್ ವೈರ್‌ಲೆಸ್, ವಿಎಂವೇರ್, ಲೆನೊವೊ, ಆಕ್ಸೆಂಚರ್, ಬೈನರಿ ಸಿಸ್ಟಮ್ಸ್ ಮತ್ತು ಮಹೇಶ್ವರಿ ಎಲೆಕ್ಟ್ರಾನಿಕ್ಸ್ ಸೇರಿದ್ದವು. 

‘ಬೆಂಗಳೂರಿನಲ್ಲಿ ಐಎಸಿಸಿ ಆಯೋಜಿಸುತ್ತಿರುವುದಕ್ಕೆ ಬಿಎಂಎಸ್ ಹಾಗೂ ಐಇಇಇಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಮಾವೇಶವನ್ನು ಆಯೋಜಿಸಲು ಬಿಎಂಎಸ್ ಅತ್ಯಂತ ಸೂಕ್ತ ಆಯ್ಕೆಯಾಗಿದೆ. ಏಕೆಂದರೆ ಇದು ದೇಶದ ಅತ್ಯಂತ ಹಳೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜು.ರಾಷ್ಟ್ರೀಯ ಭದ್ರತೆಯಾಗಿರಲಿ, ಆರ್ಥಿಕ ಅಥವಾ ಶೈಕ್ಷಣಿಕ ಸ್ಪರ್ಧಾತ್ಮಕತೆಯಾಗಿರಲಿ; ತಂತ್ರಜ್ಞಾನ ಪ್ರತಿ ಸಮಸ್ಯೆಗೆ ಉತ್ತರ ಹೊಂದಿದೆ. ದೇಶದಾದ್ಯಂತ ಎಲ್ಲಾ ಸಂಸ್ಥೆಗಳೂ ದರ ಕಡಿತಗೊಳಿಸುವ ಪ್ರಯತ್ನದಲ್ಲಿವೆ. ಎಲ್ಲ ಕ್ಷೇತ್ರಗಳಲ್ಲಿ ನಾವು ಸ್ಪರ್ಧಾತ್ಮಕತೆಯನ್ನು ಹೊಂದಬೇಕಾದರೆ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅತ್ಯಂತ ಅಗತ್ಯ’ ಎಂದರು ಎಂ.ಎನ್. ವಿದ್ಯಾಶಂಕರ್. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.