ಭಾನುವಾರ, ಅಕ್ಟೋಬರ್ 20, 2019
27 °C

ಬಿಎಂಟಿಸಿಗೆ ಪ್ರಶಸ್ತಿಯ ಗರಿ

Published:
Updated:

ಬೆಂಗಳೂರು: ನಗರ ಸಾರಿಗೆಯಲ್ಲಿ ಅಧಿಕ ಲಾಭ ಗಳಿಸಿರುವ ಬಿಎಂಟಿಸಿಗೆ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು (ಎಎಸ್‌ಆರ್‌ಟಿಯು) ಮೂರು ಪ್ರಶಸ್ತಿಗಳನ್ನು ನೀಡಿದೆ. ಅತಿ ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಸುಧಾರಣೆ ಮತ್ತು ಅಧಿಕ ಲಾಭ ಈ ಮೂರು ವಿಭಾಗಗಳಲ್ಲಿ ಬಿಎಂಟಿಸಿಗೆ ಪ್ರಶಸ್ತಿ ಲಭ್ಯವಾಗಿದೆ. ದೆಹಲಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಎ.ಕೆ. ಉಪಾಧ್ಯಾಯ ಅವರು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡಿದರು.ಬಿಎಂಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಸಿ. ಮಲ್ಲಿಕಾರ್ಜುನಯ್ಯ, ಮುಖ್ಯ ಲೆಕ್ಕಾಧಿಕಾರಿ ಡಾ. ಬಿ. ಚಿನ್ನಸ್ವಾಮಿ, ಮುಖ್ಯ ವ್ಯವಸ್ಥಾಪಕ ಕೆ. ಎನ್. ಇಂಗಳಗಿ ಉಪಸ್ಥಿತರಿದ್ದರು.

Post Comments (+)