ಬುಧವಾರ, ಮೇ 12, 2021
17 °C

ಬಿಎಂಟಿಸಿಗೆ ರಾಷ್ಟ್ರೀಯ ಹುಡ್ಕೋ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶಸ್ತಿಗಳನ್ನೇ ಬಾಚುತ್ತಿರುವ ಬಿಎಂಟಿಸಿಗೆ ರಾಷ್ಟ್ರೀಯ ಹುಡ್ಕೋ ಪ್ರಶಸ್ತಿಯ ಗರಿ ಮೂಡಿದೆ.

ಬಿಎಂಟಿಸಿಯು ಬೆಂಗಳೂರು ನಗರದ ಪ್ರಮುಖ 10 ಸ್ಥಳಗಳಲ್ಲಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರಗಳನ್ನು (ಟಿಟಿಎಂಸಿ) ನಿರ್ಮಿಸಿರುವ ಯೋಜನೆ ಹಾಗೂ ನಗರ ಪ್ರದೇಶಗಳ ಸಾರಿಗೆಯಲ್ಲಿ ಸಾರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ ಪದ್ಧತಿಗಳನ್ನು ಉತ್ತಮವೆಂದು ಪರಿಗಣಿಸಿ ಹುಡ್ಕೋ ಪ್ರಶಸ್ತಿ ಮತ್ತು ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ.ನವದೆಹಲಿಯಲ್ಲಿ ಬುಧವಾರ ನಡೆದ ಹುಡ್ಕೋ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೆಲ್ಜಾ ಅವರು ಬಿಎಂಟಿಸಿಯ ಮುಖ್ಯ ವ್ಯವಸ್ಥಾಪಕ (ಎಂಐಎಸ್) ಕೆ.ಎನ್.ಇಂಗಳಗಿ ಅವರಿಗೆ ಹುಡ್ಕೋ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹುಡ್ಕೋ ಅಧ್ಯಕ್ಷ ವಿ.ಪಿ.ಬಳಿಗಾರ್, ವಸತಿ ಸಚಿವಾಲಯದ ಕಾರ್ಯದರ್ಶಿ ಎ.ಕೆ.ಮಿಶ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.