ಸೋಮವಾರ, ಆಗಸ್ಟ್ 19, 2019
28 °C

ಬಿಎಂಟಿಸಿ ಬಸ್‌ಗಳನ್ನು ಆರಂಭಿಸಲಿ

Published:
Updated:

ವಿಜಯನಗರದ ಟಿ.ಟಿ.ಎಂ.ಸಿ.ಯಿಂದ ಹೊಸಕೋಟೆಯವರೆಗೆ ಬಿಎಂಟಿಸಿ ಕೆಂಪು ಬೋರ್ಡಿನ ಫಲಕದ ಬಸ್ಸುಗಳನ್ನು ಆರಂಭಿಸಬೇಕು.ವಿಜಯನಗರ, ಚಂದ್ರಾ ಲೇಔಟ್‌ನಿಂದ ಮೆಜೆಸ್ಟಿಕ್‌ಗೆ ನೂರಾರು ಬಸ್‌ಗಳಿವೆ. ಆದರೆ, ವಿಜಯನಗರ, ಕೆಂಪೇಗೌಡ ಬಸ್ ನಿಲ್ದಾಣ, ರಿಚ್ಮಂಡ್ ಸರ್ಕಲ್, ಮೇಯೋಹಾಲ್, ಹಲಸೂರು, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ, ಟಿ.ಸಿ.ಪಾಳ್ಯ ಮಾರ್ಗವಾಗಿ ಹೊಸಕೋಟೆಯವರೆಗೆ ನೇರವಾಗಿ ಬಸ್‌ಗಳು ಚಲಿಸುತ್ತಿಲ್ಲ.ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಈ ಮಾರ್ಗವಾಗಿ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಹಾಗಾಗಿ ತ್ವರಿತವಾಗಿ ವಿಜಯನಗರದಿಂದ ಹೊಸಕೋಟೆಯವರೆಗೂ ಬಿಎಂಟಿಸಿ ಬಸ್ಸುಗಳು ಸೇವೆ ಆರಂಭಿಸಿದರೆ ಪ್ರಯಾಣಿಕರಿಗೆ  ಅನುಕೂಲವಾಗಲಿದೆ. 

 

Post Comments (+)