ಶನಿವಾರ, ಜೂನ್ 19, 2021
27 °C

ಬಿಎಂಡಬ್ಲು ಡ್ರೈವಿಂಗ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಡಬ್ಲು ಡ್ರೈವಿಂಗ್ ತರಬೇತಿ

ಬಿಎಂಡಬ್ಲು ಗ್ರಾಹಕರಿಗೆಂದು ಕಂಪನಿ ಉತ್ತಮ ಅವಕಾಶವೊಂದನ್ನು ಮುಂದಿಟ್ಟಿದೆ. ಇದೀಗ ಭಾರತದಲ್ಲಿ ಬಿಎಂಡಬ್ಲು ಡ್ರೈವಿಂಗ್ ತರಬೇತಿಯನ್ನು ಕಂಪನಿ ಪರಿಚಯಿಸಿದ್ದು, ಆರಂಭಿಕ ಹಂತದಲ್ಲಿ ಈ ತರಬೇತಿಯನ್ನು ದೆಹಲಿ (ದೆಹಲಿಯ ಎನ್‌ಸಿಆರ್ ನ್ಯಾಷನಲ್ ಕ್ಯಾಪಿಟಲ್ ರೀಜನ್) ಮತ್ತು ಚೆನ್ನೈನಲ್ಲಿ ಫೆಬ್ರುವರಿಯಿಂದ ಮಾರ್ಚ್‌ವರೆಗೆ ನಡೆಸಲಿದೆ.ಬಿಎಂಡಬ್ಲು ಗ್ರೂಪ್ ಅಧ್ಯಕ್ಷ ಡಾ.ಆಂಡ್ರಿಯಾಫ್ ಶಾಫ್ ಮಾತನಾಡಿ, ಈ ಬಿಎಂಡಬ್ಲು ಡ್ರೈವಿಂಗ್ ತರಬೇತಿ ಪ್ರತ್ಯೇಕ ತರಬೇತಿಯಾಗಿದೆ, ಬಿಎಂಡಬ್ಲು ಗ್ರಾಹಕರ ಚಾಲನಾ ಸಾಮರ್ಥ್ಯ, ಕುಶಲತೆ, ನಿರ್ವಹಣೆ, ಸಮಯ ಪಾಲನೆ ಎಲ್ಲವನ್ನೂ ಒರೆಹಚ್ಚಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ, ಇದರೊಂದಿಗೆ ಬಿಎಂಡಬ್ಲು ಕಾರಿನ ಸಾಮರ್ಥ್ಯವನ್ನು ಅರಿತುಕೊಳ್ಳುವುದು, ಮತ್ತು ಅತ್ಯುನ್ನತ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತದೆ ಎಂದರು.ದೈನಂದಿನ ವಾಹನ ಚಾಲನೆಯಲ್ಲಿನ ಸಂಭವನೀಯ ಅಪಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದೂ ತಿಳಿಸಿದರು. ಅಷ್ಟೇ ಅಲ್ಲ, ವಾಹನ ಚಾಲನೆ ಮಾಡಬೇಕಾದಾಗ ಸರಿಯಾಗಿ ಕುಳಿತುಕೊಳ್ಳಬೇಕಾದ ಭಂಗಿ, ಸ್ಟೀರಿಂಗ್ ವ್ಹೀಲ್ ಹಿಡಿದುಕೊಳ್ಳಬೇಕಾದ ವಿಧಾನ, ಡ್ರೈವಿಂಗ್‌ನ ಪ್ರಾಥಮಿಕ ಹಂತದಿಂದ ಹಿಡಿದು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮದವರೆಗೂ ಈ ತರಬೇತಿಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.ಸ್ಟೀರಿಂಗ್ ತಂತ್ರ, ತುರ್ತು ಪರಿಸ್ಥಿತಿ ನಿರ್ವಹಣೆ, ನಿಶ್ಚಿತ ಬ್ರೇಕಿಂಗ್, ಲೇನ್ ಚೇಂಜಸ್, ಅಂಡರ್ ಸ್ಟೀರಿಂಗ್, ಓವರ್ ಸ್ಟೀರಿಂಗ್‌ನಂತಹ ಅಂಶಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಸುರಕ್ಷತಾ ಚಟುವಟಿಕೆ ಮುಂತಾದವುಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ www.bmw.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.