ಬುಧವಾರ, ನವೆಂಬರ್ 20, 2019
27 °C

`ಬಿಎಂಡಬ್ಲ್ಯು-7' ಸರಣಿ ಕಾರು ಬಿಡುಗಡೆ

Published:
Updated:

ಮುಂಬೈ: ವಾಹನ ದಿಗ್ಗಜ `ಬಿಎಂಡಬ್ಲ್ಯು' ಭಾರತದ ಮಾರುಕಟ್ಟೆಗೆ `ಬಿಎಂಡಬ್ಲ್ಯು-7' ಸರಣಿ ಕಾರನ್ನುಗುರುವಾರ  ಪರಿಚಯಿಸಿತು.

ಕಾರು ಬಿಡುಗಡೆ ಮಾಡಿದ `ಬಿಎಂಡಬ್ಲ್ಯು ಇಂಡಿಯ' ಅಧ್ಯಕ್ಷ ಫಿಲಿಪ್ ವಾನ್ಸಾರ್, `ಈ ಸರಣಿ ಕಾರುಗಳು 4 ಮಾದರಿಗಳಲ್ಲಿ ಲಭ್ಯವಿವೆ.ಮೇ  1ರಿಂದ ಮಾರಾಟ ಆರಂಭವಾಗಲಿದ್ದು, ಈಗಾಗಲೇ ಬುಕಿಂಗ್ ನಡೆದಿದೆ. ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ' ಎಂದು ಹೇಳಿದರು.

ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಕಾರಿನಲ್ಲಿ ಸೌಲಭ್ಯ, ಸುರಕ್ಷೆ ಒದಗಿಸಲಾಗಿದೆ. ಚೆನ್ನೈ ಘಟಕದಲ್ಲಿ ದೇಶೀಯವಾಗಿಯೇ ತಯಾರಿಕೆ ಆಗುತ್ತಿರುವುದರಿಂದ ಬೆಲೆ ರೂ.92 ಲಕ್ಷದಿಂದ ರೂ.1.73 ಕೋಟಿವರೆಗೂ ಇದೆ ಎಂದರು.ಹಾಗೆಂದು, ಕಾರಿನ ಗುಣಮಟ್ಟದಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)