ಬಿಎಚ್‌ಇಎಲ್‌ಗೆ ಮಹಾರತ್ನ ಸ್ಥಾನ?

7

ಬಿಎಚ್‌ಇಎಲ್‌ಗೆ ಮಹಾರತ್ನ ಸ್ಥಾನ?

Published:
Updated:

ನವದೆಹಲಿ(ಪಿಟಿಐ):ಸರ್ಕಾರಿ  ಸ್ವಾಮ್ಯದ ವಿದ್ಯುತ್ ಉಪಕರಣಗಳ ತಯಾರಿಕಾ ಕಂಪೆನಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ‘ಮಹಾರತ್ನ’ ಸ್ಥಾನ ಪಡೆಯಲಿರುವ ಮುಂದಿನ ಕಂಪೆನಿ ಎಂದು ಬೃಹತ್ ಉದ್ದಿಮೆ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.ಇಲ್ಲಿ ಆಯೋಜಿಸಲಾಗಿದ್ದ ‘ಎಐಎಂಎ’  ಸಮ್ಮೇಳನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಫುಲ್, ‘ಬಿಎಚ್‌ಇಎಲ್’ ಅತ್ಯುತ್ತಮ ಹಣಕಾಸು ಸಾಧನೆ  ಹೊಂದಿದ್ದು, ‘ಒಎನ್‌ಜಿಸಿ’, ‘ಇಂಡಿಯಲ್ ಆಯಿಲ್’, ‘ಎಸ್‌ಎಐಎಲ್’ ಮತ್ತು ‘ಎನ್‌ಟಿಪಿಸಿ’ ನಂತರ ಮಹಾರತ್ನ ಸ್ಥಾನ ಪಡೆಯಬಹುದಾದ ಐದನೆಯ ಕೇಂದ್ರೋದ್ಯಮವಾಗಲಿದೆ ಎಂದರು. ‘ಮಹಾರತ್ನ’ ಸ್ಥಾನ ಪಡೆಯಲಿರುವ ಕಂಪೆನಿಗಳು ಯೋಜನೆಯೊಂದಕ್ಕೆ ಸ್ವತಂತ್ರವಾಗಿ ್ಙ 5 ಸಾವಿರ ಕೋಟಿ ಹೂಡಿಕೆ ಮಾಡಿರಬೇಕು ಹಾಗೂ ಸತತ ಮೂರು ವರ್ಷ ್ಙ 5 ಸಾವಿರ ಕೋಟಿ ನಿವ್ವಳ ಲಾಭ ದಾಖಲಿಸಿರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry