ಬಿಎಚ್‌ಇಎಲ್‌ ಲಾಭ ₨6,615 ಕೋಟಿ

7

ಬಿಎಚ್‌ಇಎಲ್‌ ಲಾಭ ₨6,615 ಕೋಟಿ

Published:
Updated:

ಬೆಂಗಳೂರು: ಕೇಂದ್ರೋದ್ಯಮ ಸಂಸ್ಥೆ ‘ಬಿಎಚ್‌ಇಎಲ್‌’ 2012–13ನೇ ಹಣ ಕಾಸು ವರ್ಷದಲ್ಲಿ ₨50 ಸಾವಿರ ಕೋಟಿ ವಹಿವಾಟು ಗಡಿ ದಾಟಿದ್ದು, ₨6,615 ಕೋಟಿ ನಿವ್ವಳ ಲಾಭ ಗಳಿಸಿದೆ.ತಯಾರಿಕಾ ವಲಯ ಗಮನಾರ್ಹ ಪ್ರಗತಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಳೆದ ಐದು ಹಣಕಾಸು ವರ್ಷಗಳಲ್ಲಿ ಕಂಪೆನಿ ಸರಾಸರಿ ಶೇ 14ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಇತ್ತೀಚೆಗೆ ನಡೆದ 49ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಬಿಎಚ್ಇಎಲ್’ ಅಧ್ಯಕ್ಷ ಬಿ.ಪ್ರಸಾದ್ ರಾವ್ ಹೇಳಿದರು.ಕಂಪೆನಿ 2012–13ನೇ ಹಣಕಾಸು ವರ್ಷದಲ್ಲಿ ₨1323 ಕೋಟಿ ಲಾಭಾಂಶ ಘೋಷಿಸಿತ್ತು. ₨50 ಸಾವಿರ ಕೋಟಿ ವಹಿವಾಟು ಗಡಿ ದಾಟಿದ ಹಿನ್ನೆಲೆಯಲ್ಲಿ ಫೆಬ್ರುವರಿ­ಯಲ್ಲಿ ‘ಬಿಎಚ್‌ಇಎಲ್‌’ಗೆ ‘ಮಹಾರತ್ನ’ ಸ್ಥಾನಮಾನ ಲಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry