ಭಾನುವಾರ, ಜನವರಿ 26, 2020
28 °C
ಐ ಲೀಗ್‌ ಪಂದ್ಯ ಇಂದು; ಪುಟಿದೇಳುವತ್ತ ಆತಿಥೇಯರ ಚಿತ್ತ

ಬಿಎಫ್‌ಸಿ–ಸಲಗಾಂವ್ಕರ್‌ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ–ಸಲಗಾಂವ್ಕರ್‌ ಪೈಪೋಟಿ

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಸೋಲು ಕಂಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಸಲಗಾಂವ್ಕರ್‌ ಫುಟ್‌ಬಾಲ್‌ ಕ್ಲಬ್‌ ಎದುರು ಪೈಪೋಟಿ ನಡೆಸಲಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದ್ದಾರೆ.ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂ ಗಣದಲ್ಲಿ ನಡೆಯಲಿರುವ ಈ ಪಂದ್ಯ ದಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ಬಿಎಫ್‌ಸಿ ಎದುರು ನೋಡುತ್ತಿದೆ. ಈ ತಂಡ ಹಿಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ಎದುರು ಪರಾಭವಗೊಂ ಡಿತ್ತು. ತವರಿನ ಅಂಗಳದಲ್ಲಿ ಎದುರಾದ ಮೊದಲ ಸೋಲು ಅದು. ಸದ್ಯ ಈ ತಂಡದವರು 14 ಪಂದ್ಯಗಳಿಂದ 27 ಪಾಯಿಂಟ್‌ ಹೊಂದಿದ್ದಾರೆ.ಸಲಗಾಂವ್ಕರ್‌ ತಂಡ 13 ಪಂದ್ಯಗಳಿಂದ 18 ಪಾಯಿಂಟ್‌ ಹೊಂದಿದೆ. ಈ ತಂಡದ ಎದುರಿನ ಹಿಂದಿನ ಪೈಪೋಟಿಯಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ‘ಪ್ರತಿ ಪಂದ್ಯವೂ ಮುಖ್ಯ. ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನ ಪಂದ್ಯದತ್ತ ಚಿತ್ತ ಹರಿಸಿ ಆಡಬೇಕು’ ಎಂದು ಮುಖ್ಯ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)