ಭಾನುವಾರ, ಏಪ್ರಿಲ್ 11, 2021
30 °C

ಬಿಎಸ್‌ಆರ್: ಆಕಾಂಕ್ಷಿ ಮಾಜಿ ಸಂಸದರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದ ಸ್ಫರ್ಧಾಕಾಂಕ್ಷಿ ರಾಜಶೇಖರ್ ರಾಠೋಡ ಪಕ್ಷದ ಕೋರ ಕಮಿಟಿ ಸದಸ್ಯ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರನ್ನು ಭಾನುವಾರ ಭೇಟಿಯಾಗಿ ಚರ್ಚಿಸಿದರು.ಪಕ್ಷದ ಸಂಘಟನೆಯಲ್ಲಿ ತೊಡಗಿರುವ ತಾವುಗಳು ನಿಮ್ಮ ಆಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಮಂಡಿಸಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕೆ. ವಿರುಪಾಕ್ಷಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದರು.ಮೂಲತಃ ಬಿಜಾಪೂರ ಜಿಲ್ಲೆಯವರಾದ ರಾಠೋಡ ಕಳೆದ ಏಳೆಂಟು ವರ್ಷಗಳಿಂದ ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಲಂಬಾಣಿ ಜನಾಂಗದ  ಯುವಕರಾಗಿರುವ ರಾಠೋಡ ಮಾತನಾಡಿ, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿರುವೆನು.ಅನೇಕ ಗ್ರಾಮಗಳಲ್ಲಿ ಅನೇಕ ರೈತರೊಂದಿಗೆ ಒಡನಾಟ ಇದೆ. ತಾವು ಸ್ಫರ್ಧಾಕಾಂಕ್ಷಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸಂಚರಿಸುವುದಾಗಿ ತಿಳಿಸಿದರು.ಉದ್ಯಮಿ ಕೆ. ವೆಂಕಟರೆಡ್ಡಿ, ಪ್ರಮುಖರಾದ ಬೂದಿ ಗಿರಿಯಪ್ಪ, ದಶರಥರೆಡ್ಡಿ, ಊದ ಶರಣಪ್ಪ, ಸಾಲಗುಂದಿ   ಅಮರೇಶ್, ಮಲ್ಲಿಕಾರ್ಜುನ ಸಿದ್ದಾಪೂರ, ರಾಜಶೇಖರ್ ಸಿದ್ದಾಪೂರ, ಮಲ್ಲಿಕಾರ್ಜುನ ಬಿ ಮೊದಲಾದವರು ಅವರೊಂದಿಗೆ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.