ಮಂಗಳವಾರ, ಏಪ್ರಿಲ್ 20, 2021
31 °C

ಬಿಎಸ್‌ಆರ್ ಕಾಂಗ್ರೆಸ್‌ಗೆ ಅಧಿಕಾರ: ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ಎಲ್ಲ ರಾಷ್ಟ್ರೀಯ ರಾಜಕೀಯ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಗಲಾಟೆ, ಒಳಜಗಳ ನಡೆಯುತ್ತಿದೆ. ಇದನ್ನು ಮನಗಂಡ ಮೇಲೆಯೇ ಶ್ರೀರಾಮುಲು ಪಾದೇಶಿಕ ಪಕ್ಷ ರಚನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಂಸತ್ ಮಾಜಿ ಸದಸ್ಯ ವಿರೂಪಾಕ್ಷಪ್ಪ ವಿಶ್ವಾಸ ವ್ಯಕ್ತಪಡಿಸಿದರು.  ನಗರದ ಗುರುಭವನದಲ್ಲಿ ಶನಿವಾರ ಬಿಎಸ್‌ಆರ್ ಕಾಂಗ್ರೆಸ್ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.ಪಕ್ಷಕ್ಕೆ ಮತದಾರರ ಕೊರತೆಯಿಲ್ಲ. ಮುಖಂಡರ ಹಾಗೂ ಕಾರ್ಯಕರ್ತರ ಕೊರತೆಯಿದೆ. ಪಕ್ಷವನ್ನು ಸಂಘಟಿಸುವವರಿಗೆ ಮುಂದೆ ಅವಕಾಶಗಳಿವೆ. ರಾಜ್ಯದಲ್ಲಿ ನಮ್ಮ ಪಕ್ಷ ಈವರೆವಿಗೂ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎಂದರು.ಜನತೆಗೆ ಹಲವಾರು ರೀತಿಯ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಈಡೇರಿಸುವಲ್ಲಿ ಇಲ್ಲಿನ ಪಕ್ಷಗಳು ವಿಫಲವಾಗಿದ್ದು, ಜನತೆಯ ಸಮಸ್ಯೆ ಪರಿಹಾರಕ್ಕಿಂತ ಅಧಿಕಾರ ಪಡೆಯುವುದೇ ಮುಖ್ಯವಾಗಿದೆ. ರೈತರ ಮೇಲೆ ಪ್ರಮಾಣ ಮಾಡಿ ಆಡಳಿತ ಪ್ರಾರಂಭಿಸಿದ ಬಿಜೆಪಿ ನಂತರ ರೈತರ ಸಮಸ್ಯೆ ಮರೆತು ಬಿಟ್ಟಿದೆ. ಈಗಾಗಲೇ ಮತದಾರರು ಎ್ಲ್ಲಲ ಪಕ್ಷಗಳ ಆಡಳಿತ ನೋಡಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆ ತರಲು ಬಯಸ್ದ್ದಿದು, ಅದರ ಲಾಭ ಬಿಎಸ್‌ಆರ್ ಪಡೆಯಬೇಕಿದೆ ಎಂದು ತಿಳಿಸಿದರು.ಬಳ್ಳಾರಿ ಸಂಸತ್ ಸದಸ್ಯೆ ಶಾಂತಾ ಮಾತನಾಡಿ, ಬೇರೆ ಪಕ್ಷದಲ್ಲಿ ಅವಕಾಶ ವಂಚಿತರಾದವರಿಗೆ ಬಿಎಸ್‌ಆರ್ ಪಕ್ಷ ಆಲದ ಮರವಿದ್ದಂತೆ. ಈ ಪಕ್ಷದಲ್ಲಿ ಬೇಧ ಭಾವವಿಲ್ಲ ಎಲ್ಲರೂ ಸಮಾನರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಶ್ರಿರಾಮುಲು ಸಚಿವರಾಗಿದ್ದ ವೇಳೆ ಜನತೆಗಾಗಿ ಉತ್ತಮ ಕೆಲಸ ಮಾಡಿದಕ್ಕೆ ಅದನ್ನು ಸಹಿಸದ ಕೆಲವರು ಕಾಲೆಳೆಯುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಿ ಮಹಿಳೆಯರಿಗೆ ಸರಿಯಾದ ಮೀಸಲಾತಿ ನೀಡಿಲ್ಲ. ಆದರೆ, ಬಳ್ಳಾರಿಯಲ್ಲಿ ಮಹಿಳೆಯರಿಗೆ ಶೇಕಡಾ 33ರ ಬದಲಾಗಿ ಶೇಕಡಾ 55ರಷ್ಟು ಮೀಸಲಾತಿ ನೀಡಲಾಗಿದೆ. ಅಲ್ಲಿನ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಆಡಳಿತ ನಡೆಸುತ್ತಿದ್ದಾರೆ. ಒಂದು ಪಕ್ಷ ಬೆಳೆಯಲಿಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಅವರಿಂದ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕಿದೆ. ಈಗಿನಿಂದಲೇ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಚುನಾವಣೆ ಎದುರಿಸಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.ಮಾಜಿ ಶಾಸಕ ಉಮಾಪತಿ ಮಾತನಾಡಿ, ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೂ ಪ್ರಾದೇಶಿಕ ಪಕ್ಷಗಳ ಬೆಂಬಲ ಅವಶ್ಯಕವಾಗಿದೆ. ರಾಷ್ಟ್ರೀಯ ಪಕ್ಷಗಳು ಸ್ವತಂತ್ರವಾಗಿ ಆಧಿಕಾರ ಹಿಡಿಯುವ ಕಾಲ ಈಗ ಇಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಎಸ್‌ಆರ್ ಕಾಂಗ್ರೆಸ್ ಅನ್ನು ಕೆಲವರು ನಿರ್ಲಕ್ಷ್ಯ ಮಾಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷ ಉತ್ತರಿಸಲಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಮಾತನಾಡಿದರು. ಪಕ್ಷದ ಮುಖಂಡರಾದ ಶ್ರಿನಿವಾಸ್, ಪ್ರಕಾಶ್, ಎಚ್.ಜೆ. ಕೃಷ್ಣಮೂರ್ತಿ, ವೆಂಕಟೇಶ್, ಮದಕರಿ ರವಿ, ನಟರಾಜ್, ನಾಗರಾಜ್ ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.