ಮಂಗಳವಾರ, ನವೆಂಬರ್ 12, 2019
28 °C
ಮೂರು ದಿನಗಳಲ್ಲಿ ಇನ್ನೊಂದು ಪಟ್ಟಿ: ಶ್ರೀರಾಮುಲು

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Published:
Updated:

ಬಳ್ಳಾರಿ:  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಇಲ್ಲಿ ಬಿಡುಗಡೆ ಮಾಡಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಪಟ್ಟಿ ಬಿಡುಗಡೆ ಮಾಡಿದ ಅವರು, ರಾಜ್ಯ ಚುನಾವಣಾ ಆಯೋಗವು ಪಕ್ಷದ ಚಿಹ್ನೆಯ ಬೇಡಿಕೆಗೆ ಸಮ್ಮತಿ ಸೂಚಿಸಿದ್ದು, `ಫ್ಯಾನ್' ಚಿಹ್ನೆಯಡಿ ಸ್ಪರ್ಧಿಸಲಾಗುವುದು ಎಂದರು.ಪಕ್ಷವು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಇದೀಗ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನು 100 ಅಭ್ಯರ್ಥಿಗಳ ಪಟ್ಟಿ ಎರಡು, ಮೂರು ದಿನಗಳಲ್ಲಿ ಪ್ರಕಟವಾಗಲಿದೆ ಎಂದರು.ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ತಾವು ಸ್ಪರ್ಧಿಸುತ್ತಿದ್ದು, ಜಿ.ಸೋಮಶೇಖರ ರೆಡ್ಡಿ ಅವರು ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಿಂದ ಅವರ ಸ್ಪರ್ಧೆ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಜಿಲ್ಲೆಯ ಬಳ್ಳಾರಿ ನಗರ, ಸಿರುಗುಪ್ಪ ಹಾಗೂ ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ ಎಂದು ಅವರು ತಿಳಿಸಿದರು.ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಬಿ.ನಾಗೇಂದ್ರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಪಕ್ಷದಿಂದ ರಾಜ್ಯದ 9 ಜನ ಮಾಜಿ ಶಾಸಕರು ಸೇರಿದಂತೆ 4 ಜನ  ಮಾಜಿ ಸಚಿವರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ತಿಳಿಸಿದರು.ಸಾಮಾಜಿಕ ನ್ಯಾಯದ ತಳಹದಿಯಲ್ಲಿ ರಾಜ್ಯದ ಎಲ್ಲ ಜಾತಿಯವರಿಗೂ ಆದ್ಯತೆ ನೀಡಲಾಗಿದ್ದು, ಇದೇ 13ರಿಂದ ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ಅಲ್ಲದೆ, ಪ್ರಚಾರದ ಸಂದರ್ಭ ರಾಜ್ಯದ ಎಲ್ಲ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಿಗಿಂತ ಭಿನ್ನವಾದ ಚುನಾಚಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಪಕ್ಷದ ಮುಖಂಡರಾದ ಡಾ.ಎಸ್.ಜೆ.ವಿ. ಮಹಿಪಾಲ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮದನ್ ಪಟೇಲ್, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ಜಿಗಣಿ ಶಂಕರ್, ಬಾಷಾ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾವಾರು ಪಟ್ಟಿ

ಬೀದರ್ 

ಬಸವಕಲ್ಯಾಣ: ಎಂ.ಜಿ. ಮುಳೆ

ಹುಮನಾಬಾದ್: ಬ್ಯಾಂಕ್ ರೆಡ್ಡಿ

ಬೀದರ್ ದಕ್ಷಿಣ: ಪ್ರವೀಣ್ ಪೀಟರ್‌ಔರಾದ್: ಶಿವಕುಮಾರ್ ಬೆಲ್‌ದಾಳ್

ಭಾಲ್ಕಿ: ಜಗನ್ನಾಥ್ ಜಮಾದಾರ್

ಬೆಳಗಾವಿ

ಖಾನಾಪುರ: ನಾಗರಾಜ್ ಶೀಲವಂತ

ಕಿತ್ತೂರು: ಅಶೋಕ್ ಕಂಬಿ

ಬೈಲಹೊಂಗಲ: ಅರವಿಂದ್ ಕಲ್ಲಕುಟಿಕರ್

ಸವದತ್ತಿ: ಹನುಮಂತಪ್ಪ ಕಲ್ಲೂರ

ನಿಪ್ಪಾಣಿ: ಸಿದ್ದು.ಬಿ. ಪಾಟೀಲ

ಚಿಕ್ಕೋಡಿ ಸದಲಗಾ: ಸಿದ್ಧಪ್ಪ ಇಟ್ನಾಳ್

ಅಥಣಿ: ಸಿಕಂದರ್ ರಾಜಾಸಾಬ್ ಮುಲ್ಲಾ

ಕಾಗವಾಡ: ದಿವಾಕರ್ ಪೋದ್ದಾರ್

ರಾಯಬಾಗ್: ಪಾಲಿಶಂಕರ್ ಸಿಂಗೆ

ಹುಕ್ಕೇರಿ: ವಿರೂಪಾಕ್ಷಿಮೂರೆಣ್ಣವರ

ಅರಬಾವಿ: ಬಸವರಾಜ್ ಪಾಟೀಲ

ಗೋಕಾಕ್: ಬಸವಣ್ಣೆಪ್ಪ

ಯಮಕನಮರಡಿ: ಅಪ್ಪಾಸಾಹೇಬ್ ಬಸವಪ್ರಭು ನಾಯಕ್

ಕುಡುಚಿ: ಪಿ.ರಾಜೀವ್

ವಿಜಾಪುರ

ದೇವರಹಿಪ್ಪರಗಿ: ಶಿವಪುತ್ರಪ್ಪ ದೇಸಾಯಿ

ಬಸವನಬಾಗೇವಾಡಿ: ಧನಶೆಟ್ಟಿ

ಮುದ್ದೇಬಿಹಾಳ: ಬಪ್ಪರಗಿ ನಿಂಗಪ್ಪ

ನಾಗಠಾಣ: ವಿಲಾಸಬಾಬು ಅಲಮೇಲಕರ

ಇಂಡಿ: ಮಂಜುನಾಥ್ ವಂದಾಳ

ಬಾಗಲಕೋಟೆ

ಮುಧೋಳ: ಅಶೋಕ ಲಿಂಬಾವಳಿ

ತೇರದಾಳ: ರಮೇಶ್ ಕೇಸರಕೊಪ್ಪ

ಜಮಖಂಡಿ: ಅಯೂಬ್ ಪಾರ್ಥನಹಳ್ಳಿ

ಬದಾಮಿ-ಎಂ.ಎಸ್. ಪಾಟೀಲ

ಯಾದಗಿರಿ

ಶಹಪುರ: ಶಂಕ್ರಣ್ಣ ವಣಿಕ್ಯಾಳ

ಯಾದಗಿರಿ: ಮೌಲಾಲಿ

ಗುರುಮಠಕಲ್: ಬಾಬು ಚೌಹಾಣ್   ರಾಯಚೂರು

ರಾಯಚೂರು ನಗರ: ಪೂಜಾ ಗಾಂಧಿ

ಸಿಂಧನೂರು: ಕರಿಯಪ್ಪ

ಮಾನ್ವಿ: ದದ್ದಲ್ ಬಸನಗೌಡ

ಲಿಂಗಸ್ಗೂರು: ಸಿದ್ದು ವೈ. ಬಂಡಿ

ಮಸ್ಕಿ: ಶೇಖಪ್ಪ

ಗುಲ್ಬರ್ಗಾ

ಜೇವರ್ಗಿ: ಬೈಲಪ್ಪ

ಚಿತ್ತಾಪುರ: ವೆಂಕಟೇಶ್ ದಂದೂರು

ಚಿಂಚೋಳಿ: ವಿಠ್ಠಲ್ ಕರೇಅಂಬಲಗಿ

ಗುಲ್ಬರ್ಗಾ ಗ್ರಾಮಾಂತರ: ಬಾಬು ಹೊನ್ನಾನಾಯಕ್

ಗುಲ್ಬರ್ಗಾ ದಕ್ಷಿಣ: ಸತೀಶ್ ಗುತ್ತೇದಾರ

ಆಳಂದ್: ಉದಯ್ ಕುಮಾರ್ ಬಿರಾದಾರ

ಹಾವೇರಿ

ಹಾನಗಲ್: ಸೋಮಶೇಖರ್ ಕೋತಂಬ್ರಿ

ಶಿಗ್ಗಾಂವ: ಬಸವರಾಜ್ ಅಂಗಡಿ

ಹಾವೇರಿ: ಭಜಂತ್ರಿ

ಬ್ಯಾಡಗಿ: ದಾದಾಪೀರ್ ಭೂಷಿ

ಹಿರೇಕೇರೂರು: ಅಶೋಕ್

ರಾಣೆಬೆನ್ನೂರು: ಗುಡ್ಡೆಪ್ಪ ಓಲೇಕಾರ್

ಧಾರವಾಡ

ನವಲಗುಂದ: ಸಿದ್ರಾಮ ಶೆಟ್ಟರ್

ಕುಂದಗೋಳ: ವಿರುಪಾಕ್ಷಪ್ಪ ಕಳ್ಳಿಮನಿ

ಧಾರವಾಡ: ಯೋಗೀಶ್ ಗೌಡ

ಕಾರವಾರ

ಕಾರವಾರ ನಗರ: ಮಂಜುಳಾ ನಾಯಕ

ಶಿರಸಿ: ನಾಗರಾಜ್ ಹೆಗಡೆ

ಯಲ್ಲಾಪುರ: ಉಮೇಶ್ ಹೆಗಡೆ

ಕುಮಟಾ: ದತ್ತು ಪಟಗಾರ

ದಾವಣಗೆರೆ

ಹರಪನಹಳ್ಳಿ: ಸಿರಾಜ್ ಶೇಖ್

ಮಾಯಕೊಂಡ: ಜಿ.ಎಚ್. ಕೃಷ್ಣ

ಚೆನ್ನಗಿರಿ: ಅಮೀರ್ ಅಹಮದ್

ಹೊನ್ನಳ್ಳಿ: ರೇಣುಕಾಚಾರಿ

ಚಿತ್ರದುರ್ಗ

ಮೊಳಕಾಲ್ಮೂರು: ನೇರಲಗುಂಟೆ ತಿಪ್ಪೇಸ್ವಾಮಿ

ಚೆಳ್ಳಕೆರೆ: ಎಲ್.ಎನ್. ನಾಗರಾಜ್

ಚಿತ್ರದುರ್ಗ: ಫಯಾಜ್

ಹಿರಿಯೂರು: ಜಯಣ್ಣ

ಹೊಳಲ್ಕೆರೆ: ಶ್ರೀನಿವಾಸ್

ಹೊಸದುರ್ಗ: ಗೋವಿಂದರಾಜುಲು

ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ: ನವಿಲೇ ಶಿವಕುಮಾರ್

ತೀರ್ಥಹಳ್ಳಿ: ಅಶೋಕ್ ಮೂರ್ತಿ

ಶಿಕಾರಿಪುರ: ಫಕೀರಪ್ಪ

ಸೊರಬ: ಬಾಸೂರು ಚಂದ್ರೇಗೌಡ

ಸಾಗರ: ನವನೀತ

ರಾಮನಗರ

ಮಾಗಡಿ: ಆನಂದ್ ರೆಡ್ಡಿ

ಕನಕಪುರ: ಗೋವಿಂದರಾಜ್

ಚೆನ್ನಪಟ್ಟಣ: ಪಾರ್ಥಸಾರಥಿ

ತುಮಕೂರು

ತುರುವೇಕೆರೆ: ರಾಮೇಗೌಡ

ಕುಣಿಗಲ್: ಲಕ್ಷ್ಮೀನಾರಾಯಣ

ತುಮಕೂರು ಗ್ರಾಮಾಂತರ: ರಾಮಾಂಜಿನಪ್ಪ

ಕೊರಟಗೆರೆ: ಕೆ.ಎಂ. ನರಸಿಂಹಮೂರ್ತಿ

ಗುಬ್ಬಿ: ಹುಚ್ಚೇಗೌಡ

ಮಧುಗಿರಿ: ಸೌಹಾರ್ದ ಶಿವಕುಮಾರ್

ಬೆಂಗಳೂರು

ಬೊಮ್ಮನಹಳ್ಳಿ: ಶ್ರೀನಿವಾಸ್

ಯಶವಂತಪುರ: ಲೋಕೇಶ್‌ಗೌಡ

ದಾಸರಹಳ್ಳಿ:  ಪಿ.ಎನ್. ಕೆಂಪರಾಜು

ಮಹದೇವಪುರ: ಮಯೂರ್ ಪಟೇಲ್

ಬೆಂಗಳೂರು ದಕ್ಷಿಣ: ರವಿಚಂದ್ರ

ಗಾಂಧಿನಗರ: ವಿ ನಾಗರಾಜ್

ರಾಜಾಜಿನಗರ: ಹರೀಶ್ ಆರಾಧ್ಯ

ಮಹಾಲಕ್ಷ್ಮಿ ಲೇಔಟ್: ಕೃಷ್ಣಮೂರ್ತಿ

ಚಾಮರಾಜನಗರ

ಚಾಮರಾಜನಗರ: ರಕ್ಷಿತಾ ಪ್ರೇಮ್

ಚಿಕ್ಕಬಳ್ಳಾಪುರ

ಗೌರಿಬಿದನೂರು: ಬಿ.ಕೆ. ಶಿವಪ್ಪ

ಚಿಕ್ಕಮಗಳೂರು

ಶೃಂಗೇರಿ: ಪೂರ್ಣೇಶ್

ಹಾಸನ

ಶ್ರವಣಬೆಳಗೋಳ: ಮಂಜುನಾಥ್

ಅರಸಿಕೆರೆ: ಸಂಜಯ ನಾಗತಿಹಳ್ಳಿ

ಹಾಸನ ನಗರ: ಸಲೀಂ

ಹೊಳೆನರಸೀಪುರ: ಶೋಭಾ ಪ್ರಕಾಶ್

ಅರಕಲಗೂಡು: ಲಿಂಗರಾಜ್

ಸಕಲೇಶಪುರ: ಶ್ರೀಧರ್ ಕಲವೀರ

ಕೋಲಾರ

ಮುಳಬಾಗಿಲು: ಲೋಕೇಶ್

ಬಂಗಾರಪೇಟೆ: ಕಲವಂಚಿ ವೆಂಕಟೇಶ್

ಮೈಸೂರು

ಪಿರಿಯಾಪಟ್ಟಣ: ಗಣೇಶ್

ಕೃಷ್ಣರಾಜ ನಗರ: ಡಾ.ಬಿ.ಮಹದೇವ ಸ್ವಾಮಿ

ಹುಣಸೂರು: ನಿಂಗಾನಾಯಕ

ಚಾಮುಂಡೇಶ್ವರಿ: ಕೆ.ಪಿ. ಚಿದಾನಂದ್

ಕೃಷ್ಣರಾಜ್: ಎಚ್.ಎಸ್. ನಂಜುಂಡಸ್ವಾಮಿ

ಚಾಮರಾಜ: ಜಯಪ್ರಕಾಶ್

ನರಸಿಂಹರಾಜ: ಇಕ್ರಮ್ ಸಿದ್ಧಿಕ್

ಉಡುಪಿ

ಬೈಂದೂರು: ಉದಯ ಕಾರವಿ

ಉಡುಪಿ: ಸತೀಶ್ ಪೂಜಾರಿ

ಕಾಪು: ವೆಂಕಟೇಶ್ ಅಂಚನ

ಕಾರ್ಕಳ: ಸಂತೋಷ್

ಮಂಡ್ಯ

ಮಳವಳ್ಳಿ: ಡಾ.ಮೂರ್ತಿ

ಮದ್ದೂರು: ಪ್ರವೀಣ್

ಮೇಲುಕೋಟೆ: ಉದಯಕುಮಾರ್

ಶ್ರೀರಂಗಪಟ್ಟಣ: ಗಂಜಂ ಶಿವು

ಬಳ್ಳಾರಿ

ಬಳ್ಳಾರಿ ಗ್ರಾಮೀಣ: ಬಿ.ಶ್ರೀರಾಮುಲು

ಸಂಡೂರು: ಚೆನ್ನಬಸಪ್ಪ

ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್

ಕಂಪ್ಲಿ: ಟಿ.ಎಚ್. ಸುರೇಶ್ ಬಾಬು

ಹೂವಿನಹಡಗಲಿ: ಹೇಮಂತ್ ಭಾರತಿ

ಹೊಸಪೇಟೆ: ರಾಣಿ ಸಂಯುಕ್ತ

ಕೊಪ್ಪಳ

ಯಲಬುರ್ಗಾ: ನವೀನ್ ಗುಳಗಣ್ಣವರ

ಕನಕಗಿರಿ: ಮುಕುಂದರಾವ್ ಭವಾನಿಮಠ

ಕುಷ್ಟಗಿ: ಗೋನಾಳ್ ರಾಜಶೇಖರ್‌ಗೌಡ

ಗದಗ ಜಿಲ್ಲೆ

ಗದಗ: ಅನಿಲ್ ಮೆಣಸಿನಕಾಯಿ

ಶಿರಹಟ್ಟಿ: ಜಯಶ್ರೀ ಹಳ್ಳೆಪ್ಪನವರ

***

ಪ್ರತಿಕ್ರಿಯಿಸಿ (+)