ಶುಕ್ರವಾರ, ಜೂನ್ 25, 2021
30 °C

ಬಿಎಸ್‌ಆರ್ ಪಕ್ಷಕ್ಕೆ ಸಿರಾಜ್ ಶೇಖ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯ ತಮ್ಮ ಸಾವಿರಾರು ಬೆಂಬಲಿಗರ ಸಹಮತದೊಂದಿಗೆ ಮಾಜಿ ಸಚಿವರಾದ ಶ್ರೀರಾಮುಲು ಸ್ಥಾಪಿಸಿ ರುವ ನೂತನ ಬಿಎಸ್‌ಆರ್ ಪಕ್ಷಕ್ಕೆ  ಸೇರ್ಪಡೆಗೊಳ್ಳುವುದಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್‌ಶೇಖ್ ಪ್ರಕಟಿಸಿದರು. ಇಲ್ಲಿಗೆ ಸಮೀಪದ ಬಂಡೀಹಳ್ಳಿ ಬಳಿ ಇರುವ ತಮ್ಮ ತೋಟದ ಮನೆಯಲ್ಲಿ ಶನಿವಾರ ತಮ್ಮ ಅಸಂಖ್ಯಾತ ಬೆಂಬಲಿಗರೊಂದಿಗೆ ಸಮಾಲೋಚನೆ ಸಭೆ ನಡೆಸಿ ಬಳಿಕ ಪ್ರಜಾವಾಣಿ ಯೊಂದಿಗೆ ಮಾತನಾಡಿ ಅವರು ಈ ವಿಷಯ ತಿಳಿಸಿದರು.ತಾವು ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗ, ವಸತಿ ಸಹಿತ ಕುಡಿಯುವ ನೀರು, ರಸ್ತೆ ಹಾಗು ನೀರಾವರಿ ಯೋಜನೆಗಳ ಪುನಶ್ಚೇತನ, ಮತ್ತು ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ  ನಿರಂತರ ವಾಗಿ ಶ್ರಮಿಸಿರುವ ಹಿನ್ನೆಲೆಯಲ್ಲಿ ಶ್ರೀರಾಮುಲು ತಮ್ಮನ್ನು ನೂತನ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.ಈ ಹಿಂದೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಗೆ ಮಾದರಿಯಾಗಿ ಅಭಿವೃದ್ಧಿ ಕೈಗೊಂ ಡಿದ್ದರೂ ಅಲ್ಲಿನ ಉಸಿರುಗಟ್ಟಿದ ವಾತಾವರಣದಿಂದಾಗಿ ಪಕ್ಷ ತೊರೆದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಯಾಗಬೇಕಾಯಿತು ಎಂದರು.ಆ ಸಂದರ್ಭದಲ್ಲಿ ಬಿಜೆಪಿ ಕೋಮು ವಾದಿ ಎನ್ನುವ ಕಾರಣಕ್ಕೆ ತಮ್ಮ ಅನೇಕ ಬೆಂಬಲಿಗರು ಕಾಂಗ್ರೆಸ್‌ನಲ್ಲಿಯೆ ಉಳಿದರು. ಆದರೆ, ಈ ಬಾರಿ ಬಿಎಸ್‌ಆರ್ ಪಕ್ಷಕ್ಕೆ ತಾವು ಸೇರ್ಪಡೆ ಆಗುತ್ತಿ ರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ತಮ್ಮ ಎಲ್ಲ ಸಮಾನ ಮನಸ್ಕ ಬೆಂಬಲಿಗರು ತಮ್ಮನ್ನು ಹಿಂಬಾ ಲಿಸುವ ವಿಶ್ವಾಸ ವ್ಯಕ್ತಪಡಿಸಿದರು.ತಾಲ್ಲೂಕಿನ ನಂದೀಪುರ ಯಾತ್ರಿ ನಿವಾಸ ಸೇರಿದಂತೆ ಹಗರಿಬೊಮ್ಮನ ಹಳ್ಳಿ ಜಲಾಶಯದ ಬಳಿ ಉದ್ಯಾನವನ ಮತ್ತು ಇತಿಹಾಸ ಪ್ರಸಿದ್ಧ ಬಂಡೆ ರಂಗ ನಾಥ ಬೆಟ್ಟ ಪ್ರದೇಶದ ಅಭಿವೃದ್ಧಿಗೆ, ತಾವು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಇಲಾಖೆ ರೂ.5 ಕೋಟಿ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಆದರೆ, ತಾವು ಅನುದಾನ ಒದಗಿಸಿ ಅಭಿವೃದ್ಧಿ ಪಡಿಸು ತ್ತಿರುವುದಾಗಿ ಎಂದು ಹೇಳುತ್ತಿರುವ ಶಾಸಕ ನೇಮರಾಜ್ ನಾಯ್ಕ ನೀತಿಗೆಟ್ಟ ರಾಜಕಾರಣಿ ಎಂದು ಟೀಕಿಸಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಗುಣ ಮಟ್ಟದ ಕಾಮಗಾರಿಗಳಿಗೆ ಪ್ರಾಶಸ್ತ್ಯ ನೀಡದೆ, ಅಧಿಕಾರಿಗಳೊಂದಿಗೆ ಶಾಮೀಲಾಗಿ ಯೋಜನೆಗಳನ್ನು ಅಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯನ್ನು ಅತಂತ್ರಗೊಳಿಸಿರುವ ಕಾರಣಕ್ಕೆ ನೇಮರಾಜ್ ನಾಯ್ಕ ಅವರೊಂದಿಗೆ ಸಂಪರ್ಕ ಕಡಿದುಕೊಳ್ಳ ಬೇಕಾಯಿತು ಎಂದು ಸ್ಪಷ್ಟಪಡಿಸಿದರು.ನೇಮರಾಜ್‌ನಾಯ್ಕರ ಹಿಂದಿರುವ ಮುಖಂಡರು ಮತ್ತು ಕಾರ್ಯಕರ್ತರು ಬಿಎಸ್‌ಆರ್ ಪಕ್ಷಕ್ಕೆ ಸೇರಲು ತುದಿ ಗಾಲಲ್ಲಿ ನಿಂತಿದ್ದು, ತಮ್ಮ ಸೂಚನೆಗೆ ಕಾಯು ತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೇಮರಾಜ್ ನಾಯ್ಕ ಕೆಲವೇ ಕಾರ್ಯ ಕರ್ತರೊಂದಿಗೆ ಬಿಜೆಪಿಯಲ್ಲಿ ಉಳಿಯ ಲಿದ್ದಾರೆ ಎಂದು ವ್ಯಂಗ್ಯವಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಮರಿಯಮ್ಮನಹಳ್ಳಿ ಏಕಾಂಬರೇಶ್ ನಾಯ್ಕ, ನಾಗಲಾಪುರ ಗ್ರಾ.ಪಂ.ಅಧ್ಯಕ್ಷ ಕೊಟ್ರೇಶ್, ಹ.ಬೊ.ಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಂ. ಚೋಳ ರಾಜ್, ಮುಖಂಡರಾದ ಹಾಜೀ ಯೂಸೂಫ್, ಬಿ. ರಿಯಾಜ್, ಬೀಡಿ ಇಸ್ಮಾಯಿಲ್, ಕೆ.ಎಸ್.ಜಿನ್ನಾಸಾಬ್, ಕೋಲ್ಕಾರ್ ಇಸ್ಮಾಯಿಲ್‌ಸಾಬ್, ಕೆ.ಎಸ್.ಸಾಹುಲ್‌ಕೆ.ಮಹಮದ್ ಇಸ್ಮಾಯಿಲ್, ಹುಲ್ಮನಿ ಪೀರ್‌ಸಾಬ್, ಹು. ಕ್ವಾಟೆ , ಕಂಚಿಕೇರಿ ಬುಡೇನ್‌ಸಾಬ್ ಹಾಗೂ ಡಿಎಚ್‌ಕೆ ಮಾಬು ಸಾಬ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.