ಬಿಎಸ್‌ಎನ್‌ಎಲ್‌ಗೆ ಜಯ

7

ಬಿಎಸ್‌ಎನ್‌ಎಲ್‌ಗೆ ಜಯ

Published:
Updated:

ಬೆಂಗಳೂರು: ಬಿಎಸ್‌ಎನ್‌ಎಲ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದರು.



ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 25-17, 26-24, 25-22ರಲ್ಲಿ ರಲ್ಲಿ ಕೆಎಸ್‌ಪಿ ತಂಡವನ್ನು ಮಣಿಸಿತು. ಆದರೆ  ಮಳೆಯ ಕಾರಣ ಎಸ್‌ಡಬ್ಲ್ಯುಆರ್ ಹಾಗೂ ಎಂಇಜಿ ಪಂದ್ಯವನ್ನು ಮುಂದೂಡಲಾಯಿತು. ಈ ಪಂದ್ಯ ಅ.20ರಂದು ನಡೆಯಲಿದೆ.



`ಬಿ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ 25-21, 25-17, 25-18ರಲ್ಲಿ ಅಟ್ಲಾಂಟಾ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.



ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ವಾಲಿಬಾಲ್: ಚಿತ್ರದುರ್ಗದ ಮುರುಗರಾಜೇಂದ್ರ ಮಠದ ಆಶ್ರಯದಲ್ಲಿ ಅ.18ರಿಂದ 20ರವರೆಗೆ ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry