ಬಿಎಸ್‌ಎನ್‌ಎಲ್‌ಗೆ ಮಣಿದ ಪೊಲೀಸ್ ತಂಡ

7

ಬಿಎಸ್‌ಎನ್‌ಎಲ್‌ಗೆ ಮಣಿದ ಪೊಲೀಸ್ ತಂಡ

Published:
Updated:
ಬಿಎಸ್‌ಎನ್‌ಎಲ್‌ಗೆ ಮಣಿದ ಪೊಲೀಸ್ ತಂಡ

ಬೆಂಗಳೂರು: ಪ್ರಬಲ ಪೈಪೋಟಿ  ಎದುರಾದರೂ ದಿಟ್ಟ ಆಟ ಪ್ರದರ್ಶಿಸಿದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್)  ತಂಡ ಚೊಚ್ಚಲ ಕರ್ನಾಟಕ ವಾಲಿ ಲೀಗ್‌ನ (ಕೆವಿಎಲ್) ಭಾನುವಾರ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡವನ್ನು ಮಣಿಸಿತು.

ಮಲ್ಲೇಶ್ವರದ ಕೋದಂಡರಾಮಪುರ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 3-0 (25-20, 25-22, 25-19) ಸೆಟ್‌ಗಳಿಂದ ಕೆಎಸ್‌ಪಿಗೆ ಸೋಲುಣಿಸಿತು. 55 ನಿಮಿಷ ನಡೆದ ಹಣಾಹಣಿಯಲ್ಲಿ ವಿಜಯಿ ತಂಡದ ಮಂಜುನಾಥ್, ಮಾರುತಿ ಜಿ. ನಾಯಕ್, ಇಂಡಿಯನ್ ವಾಲಿ ಲೀಗ್‌ನಲ್ಲಿ ಆಡಿದ್ದ ಟಿ.ಡಿ. ರವಿಕುಮಾರ್ ಉತ್ತಮ ಪ್ರದರ್ಶನ ನೀಡಿದರು. 

ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ 3-0ರಲ್ಲಿ  (25-21, 25-21, 27-25) ಡಿವೈಎಸ್‌ಎಸ್ ತಂಡವನ್ನು ಸೋಲಿಸಿತು. ಎಂಇಜಿ 30-28, 25-22, 15-25, 15-25, 15-10ರಲ್ಲಿ  ಎಲ್‌ಐಸಿಗೆ ಸೋಲುಣಿಸಿತು.

ಈ ಪಂದ್ಯ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry