ಬಿಎಸ್‌ಎನ್‌ಎಲ್‌ಗೆ ರೂ 1500 ಕೋಟಿ ಸಬ್ಸಿಡಿ

7

ಬಿಎಸ್‌ಎನ್‌ಎಲ್‌ಗೆ ರೂ 1500 ಕೋಟಿ ಸಬ್ಸಿಡಿ

Published:
Updated:

ನವದೆಹಲಿ(ಪಿಟಿಐ): ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸೇವೆ ವಿಸ್ತರಿಸಲು `ಬಿಎಸ್‌ಎನ್‌ಎಲ್'ಗೆ ರೂ 1,500 ಕೋಟಿ ಸಬ್ಸಿಡಿ ನೆರವು ನೀಡಲು ಅಂತರ ಸಚಿವಾಲಯಗಳ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ.

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಬಿಎಸ್‌ಎನ್‌ಎಲ್‌ಗೆ ಒಟ್ಟು ರೂ 2,750 ಕೋಟಿ ಸಹಾಯಧನ ನೀಡುವಂತೆ ಶಿಫಾರಸು ಮಾಡಿತ್ತು. ಮೊದಲ ಹಂತದಲ್ಲಿ ರೂ 1500 ಕೋಟಿ ಬಿಡುಗಡೆಗೆ ಅನುಮೋದನೆ ಲಭಿಸಿದೆ ಎಂದು ದೂರವಾಣಿ ಇಲಾಖೆ ಕಾರ್ಯದರ್ಶಿ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry