ಮಂಗಳವಾರ, ಜೂನ್ 15, 2021
27 °C

ಬಿಎಸ್‌ಎನ್‌ಎಲ್‌ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಸ್‌ಎನ್‌ಎಲ್‌ ತಂಡದವರು ಕರ್ನಾಟಕ ವಾಲಿಬಾಲ್‌ ಸಂಸ್ಥೆ (ಕೆವಿಎ) ಆಶ್ರಯದ ಐದನೇ ಹಾಗೂ ಅಂತಿಮ ಹಂತದ ಕರ್ನಾಟಕ ವಾಲಿಬಾಲ್‌ ಲೀಗ್‌ (ಕೆವಿಎಲ್‌) ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದಾರೆ.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ 26–24, 25–19, 25–23ರಲ್ಲಿ ಕರ್ನಾಟಕ ವಾಲಿಬಾಲ್‌ ಕ್ಲಬ್‌ (ಕೆವಿಸಿ) ತಂಡವನ್ನು ಸುಲಭವಾಗಿ ಮಣಿಸಿತು.ಒಟ್ಟು 70 ನಿಮಿಷಗಳಿಂದ ಕೂಡಿದ್ದ ಹಣಾಹಣಿಯಲ್ಲಿ ಟಿ.ಡಿ.ರವಿಕುಮಾರ್, ಮಾರುತಿ ಜಿ ನಾಯಕ್, ಸತೀಶ್‌ ಕುಮಾರ್‌ ಮತ್ತು ಮಹಾಂತೇಶ್ ಅತ್ಯುತ್ತಮ ಆಟ ಪ್ರದರ್ಶಿಸಿ ಬಿಎಸ್‌ಎನ್‌ಎಲ್‌ ತಂಡಕ್ಕೆ ನಿರಾಯಾಸವಾಗಿ ಜಯ ತಂದುಕೊಟ್ಟರು.ಡಿವೈಇಎಸ್‌ಗೆ ಮತ್ತೊಂದು ಗೆಲುವು: ಅಮೋಘ ಆಟ ಮುಂದುವರಿಸಿರುವ ಡಿವೈಇಎಸ್‌ ತಂಡ 21–25, 25–21, 25–18, 28–26ರಲ್ಲಿ ಪೋಸ್ಟಲ್‌ ತಂಡದ ಎದುರು ಗೆಲುವು ಪಡೆಯಿತು.ಈ ತಂಡದ ಗಣೇಶ್, ಶರವಣ, ಸೂರಜ್‌ ಜಿ ನಾಯಕ ಹಾಗೂ ಅಖಿನ್‌ ಬಲಿಷ್ಠ ಸ್ಮ್ಯಾಷ್‌ ಹಾಗೂ ಸರ್ವ್‌ಗಳ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ಪೋಸ್ಟಲ್‌ ಪರ ಸೆಂಥಿಲ್‌, ಯಶವಂತ್‌ ಮತ್ತು ಜೀವನ್‌ ಸೋಲಿನ ನಡುವೆಯೂ ಮೆಚ್ಚುವಂತ ಆಟವಾಡಿದರು.ಗೆದ್ದ ಜೆಎಸ್‌ಡಬ್ಲ್ಯು: ದಿನದ ಅಂತಿಮ ಹೋರಾಟದಲ್ಲಿ ಜೆಎಸ್‌ಡಬ್ಲ್ಯು ತಂಡ 23–25, 23–25, 25–22, 25–18, 15–7ರಲ್ಲಿ ಎಂಇಜಿ ತಂಡವನ್ನು ಪರಾಭವಗೊಳಿಸಿತು.ತೀವ್ರ ಪೈಪೋಟಿಯಿಂದ ಕೂಡಿದ್ದ 95 ನಿಮಿಷಗಳ ಸೆಣಸಾಟದಲ್ಲಿ ವಿಜಯಿ ತಂಡದ ಗುರ್ಜಿಂದರ್‌ ಸಿಂಗ್‌, ಜಗದೀಶ್‌ ಮತ್ತು ಆಕಾಶ್‌ ಮಿಂಚಿನ ಆಟವಾಡಿದರು. ಮೊದಲ ಎರಡೂ ಸೆಟ್‌ಗಳಲ್ಲಿ ಗೆಲುವು ಕಂಡಿದ್ದ ಎಂಇಜಿ ನಂತರದ ಸೆಟ್‌ಗಳಲ್ಲಿ  ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.