ಬಿಎಸ್‌ಎನ್‌ಎಲ್: ಅಧಿಕಾರಿ ನಿವಾಸದ ಮೇಲೆ ಸಿಬಿಐ ದಾಳಿ

7

ಬಿಎಸ್‌ಎನ್‌ಎಲ್: ಅಧಿಕಾರಿ ನಿವಾಸದ ಮೇಲೆ ಸಿಬಿಐ ದಾಳಿ

Published:
Updated:

ನವದೆಹಲಿ: ಬಿಎಸ್‌ಎನ್‌ಎಲ್‌ನ ಸೀನಿಯರ್ ಸೆಕ್ಷನ್ ಆಫೀಸರ್ ತುಳಸಿರಾಮ ಶಾರದ ಅವರ ಮನೆಯ ಮೇಲೆ ಕೇಂದ್ರ ತನಿಖಾ ದಳ ದಾಳಿ ನಡೆಸಿ ಆದಾಯ ಮೀರಿ ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದೆ.ಬೆಂಗಳೂರಿನ ದೂರಸಂಪರ್ಕ ಕಚೇರಿಯಲ್ಲಿ ಕೆಲಸ ಮಾಡುವ ತುಳಸಿರಾಮ ಅವರ ವಿಜಯ ನಗರದ ಮನೆ ಮೇಲೆ ಸಿಬಿಐ ಈಚೆಗೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ 57ಲಕ್ಷ ರೂ ನಗದು, ಬ್ಯಾಂಕಿನಲ್ಲಿ 25ಲಕ್ಷ ರೂ ಠೇವಣಿ, ಅಂದಾಜು 50 ಲಕ್ಷ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry