ಬುಧವಾರ, ಜನವರಿ 22, 2020
16 °C

ಬಿಎಸ್‌ಎಫ್ ಆಡಳಿತ ಹೈಟೆಕ್: ಇ-ಕಚೇರಿ ಯೋಜನೆಗೆ ಸಚಿವ ಚಿದಂಬರಂ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಡಿ ಭದ್ರತಾ ಪಡೆಯ ಆಡಳಿತವನ್ನು ಕಂಪ್ಯೂಟರೀಕರಣಗೊಳಿಸುವ ಹಾಗೂ ಸಿಬ್ಬಂದಿ ಸುಲಭವಾಗಿ ಆನ್‌ಲೈನ್ ಸೌಲಭ್ಯ ಪಡೆಯುವ ಉದ್ದೇಶದ, 229 ಕೋಟಿ ರೂಪಾಯಿ ವೆಚ್ಚದ ಇ- ಕಚೇರಿ ಯೋಜನೆಯನ್ನು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಗುರುವಾರ ಉದ್ಘಾಟಿಸಿದರು.`ಸಂಬಳ, ತೆರಿಗೆ, ರಜಾ ದಿನ ಸೇರಿದಂತೆ ಅನೇಕ ಮಾಹಿತಿಗಳನ್ನು ಸಿಬ್ಬಂದಿಯು ಸುಲಭವಾಗಿ ಪಡೆಯಬಹುದಾದ ಈ ಯೋಜನೆ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. 1.98 ಲಕ್ಷ ಸಿಬ್ಬಂದಿಗೆ ನೆರವಾಗಲಿರುವ ಯೋಜನೆಯಿಂದ ಬಿಎಸ್‌ಎಫ್‌ನ ಆಡಳಿತದ ಗುಣಮಟ್ಟ ಹೆಚ್ಚಾಗುವ ಭರವಸೆ ಇದೆ~ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.`ಲೆಕ್ಕಪತ್ರ ವ್ಯವಸ್ಥೆ, ಪಡೆಗಳ ಚಲನವಲನ, ಅವುಗಳ ನಿಯೋಜನೆ ಎಲ್ಲವೂ ಕಂಪ್ಯೂಟರೀಕರಣಗೊಳ್ಳಲಿದೆ. ಹಿರಿಯ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ನಡುವೆ ಉತ್ತಮ ಸಂಪರ್ಕ ಸಾಧ್ಯವಾಗುವುದರಿಂದ ಯಾವುದೇ ತೀರ್ಮಾನ ಕೈಗೊಳ್ಳುವುದು ಸುಲಭವಾಗುತ್ತದೆ~ ಎಂದು ವಿವರಿಸಿದರು.ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಸಹ `ಇಂಟ್ರಾನೆಟ್ ಪ್ರಹಾರಿ ಪ್ರಾಜೆಕ್ಟ್~ (ಐಐಪಿ) ಹೆಸರಿನ ಈ ಯೋಜನೆಗಾಗಿ ಪ್ರಸ್ತಾವ ಸಲ್ಲಿಸಿದೆ ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)