ಬುಧವಾರ, ಡಿಸೆಂಬರ್ 11, 2019
27 °C

ಬಿಎಸ್‌ಎಫ್ ಯೋಧನಿಂದ ಗುಂಡಿನ ದಾಳಿ: ಇಬ್ಬರು ಹಿರಿಯ ಅಧಿಕಾರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ಎಫ್ ಯೋಧನಿಂದ ಗುಂಡಿನ ದಾಳಿ: ಇಬ್ಬರು ಹಿರಿಯ ಅಧಿಕಾರಿಗಳ ಸಾವು

ಗೌಹಾಟಿ (ಪಿಟಿಐ): ಬಿಎಸ್‌ಎಫ್ ಯೋಧನೊಬ್ಬ ತನ್ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಗುರುವಾರ ನಡೆದಿದೆ.

ಇಂಡೋ-ಬಾಂಗ್ಲಾ ಗಡಿ ಪ್ರದೇಶದಲ್ಲಿರುವ ಅಸ್ಸಾಂನ ದುಬ್ರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಭಾಕರ್ ಮಿಶ್ರಾ ಎಂಬ ಯೋಧ ಈ ಕೃತ್ಯವೆಸಗಿದ ಆರೋಪಿ.ಹಿರಿಯ ಶ್ರೇಣಿ ಅಧಿಕಾರಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಬಳಿಕ ತನ್ನ ಸಹದ್ಯೋಗಿ ಮೇಲೆಯು ಗುಂಡಿನ ಮಳೆಗರೆದಿದ್ದಾನೆ. ಸ್ಥಳದಲ್ಲೇ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ.  ಇತರ ಯೋಧರು ಪ್ರಭಾಕರ್‌ನನ್ನು ಬಂಧಿಸುವ ವೇಳೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಆರೋಪಿ ಪ್ರಭಾಕರ್ ಮತ್ತು ಆತನ ಸಹದ್ಯೋಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಅಸ್ಸಾಂ ಪೊಲೀಸರು  ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)