ಮಂಗಳವಾರ, ಜೂನ್ 15, 2021
27 °C

ಬಿಎಸ್‌ಪಿ, ಎಸ್‌ಪಿ ಕಾರ್ಯಕರ್ತರ ಘರ್ಷಣೆ: ಓರ್ವನ ಸಾವು, ಐವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರದ್ವಾಯ್ (ಉತ್ತರ ಪ್ರದೇಶ) (ಪಿಟಿಐ): ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹಾಗೂ ಸಮಾಜವಾದಿ ಪಕ್ಷಗಳ (ಎಸ್‌ಪಿ) ಕಾರ್ಯಕರ್ತರ ನಡುವೆ ಶನಿವಾರ ನಡೆದ ಘರ್ಷಣೆಯಲ್ಲಿ ಓರ್ವ ಹತನಾಗಿದ್ದು, ಐದು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಿಕ್ರಾ ಬರಾರ್ ಗ್ರಾಮದ ಸಾಂಡಿಲ ಪ್ರದೇಶದಲ್ಲಿ ಕೆಲ ಜನರು ಮೆರವಣಿಗೆ ನಡೆಸುತ್ತಿದ್ದ ವೇಳೆ ವಿರೋಧಿ ಗುಂಪಿನ ಕೆಲವರು ಬಂದು ಆಕ್ಷೇಪ ವ್ಯಕ್ತಪಡಿಸಿದ ವೇಳೆ ಘರ್ಷಣೆ ಉಂಟಾಗಿದ್ದು, ಅದರಲ್ಲಿ ಓರ್ವ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ.ಶ್ರೀವಾಸ್ತವ್ ಹೇಳಿದರು.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿರುವ ಬಿಎಸ್‌ಪಿ ಶಾಸಕ ಹಾಗೂ ಮಾಜಿ ಸಚಿವ ಅಬ್ದುಲ್ ಮನ್ನಾನ್ ಅವರು ಹತನಾಗಿರುವ ವ್ಯಕ್ತಿ ಬಿಎಸ್‌ಪಿ ಕಾರ್ಯಕರ್ತನಾಗಿದ್ದು, ಘಟನೆಗೆ ಎಸ್‌ಪಿ ಕಾರ್ಯಕರ್ತರು ಕಾರಣರೆಂದು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.