ಬಿಎಸ್‌ಪಿ ಶಾಸಕನ ಪುತ್ರನಿಂದ ಕೊಲೆ ಯತ್ನ

7

ಬಿಎಸ್‌ಪಿ ಶಾಸಕನ ಪುತ್ರನಿಂದ ಕೊಲೆ ಯತ್ನ

Published:
Updated:

ಬರೇಲಿ (ಪಿಟಿಐ): ಇಲ್ಲಿನ ನವಾಬ್‌ಗಂಜ್ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಆಡಳಿತಾರೂಢ ಬಿಎಸ್‌ಪಿಯ ಮೇಲ್ಮನೆ ಸದಸ್ಯ ಕೇಸರ್ ಸಿಂಗ್ ಗಂಗ್ವಾರ್ ಅವರ ಪುತ್ರ ಮತ್ತು ಇತರ ಇಬ್ಬರು ದಲಿತ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ.ಆದರೆ ಈ ಆರೋಪವನ್ನು ಗಂಗ್ವಾರ್ ಅಲ್ಲಗಳೆದಿದ್ದು, ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ವಿರೋಧಿಗಳು ನಡೆಸಿರುವ ಸಂಚು ಇದು ಎಂದು ಹೇಳಿದ್ದಾರೆ.‘ಶಾಸಕರ ಪುತ್ರ ಮುನೇಂದ್ರ ಗಂಗ್ವಾರ್ ಅವರು ತಮ್ಮ ಇಬ್ಬರು ಸಹಚರರಾದ ರಾಜೇಂದ್ರ ಸಿಂಗ್ ಮತ್ತು ಬುದ್ಧಪಾಲ್‌ಬುದ್ದಿ ಅವರೊಂದಿಗೆ ಸೇರಿಕೊಂಡು ಕಾಳಿಚರಣ್ ಜಾಟವ್ ಎಂಬವರನ್ನು ಗುಂಡಿಟ್ಟು ಕೊಲ್ಲಲು ಯತ್ನಿಸಿರುವುದು ನಿಜ. ಜಾಟವ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry