ಬಿಎಸ್‌ವೈ ಆಸ್ತಿ ಜಪ್ತಿಗೆ ಮುಂದಾದ ಇ.ಡಿ

7

ಬಿಎಸ್‌ವೈ ಆಸ್ತಿ ಜಪ್ತಿಗೆ ಮುಂದಾದ ಇ.ಡಿ

Published:
Updated:
ಬಿಎಸ್‌ವೈ ಆಸ್ತಿ ಜಪ್ತಿಗೆ ಮುಂದಾದ ಇ.ಡಿ

ಬೆಂಗಳೂರು: ಜಿಂದಾಲ್‌ ಕಂಪೆನಿ ಯಿಂದ ₨ 40 ಕೋಟಿ ಲಂಚ ಪಡೆದಿ ರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಆಧರಿಸಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾ ಲಯ (ಇ.ಡಿ) ಪ್ರಕ್ರಿಯೆ ಆರಂಭಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಇತರೆ ದಾಖಲೆಗಳನ್ನು ಒದಗಿಸುವಂತೆ ಜಾರಿ ನಿರ್ದೇಶ ನಾಲಯದ ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ದಾಖಲೆ ದೊರೆತ ತಕ್ಷಣವೇ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಚುರುಕುಗೊಳಿಸಲು ನಿರ್ಧರಿಸಿದ್ದಾರೆ.ಗಣಿ ಕಂಪೆನಿಗೆ ಅನುಕೂಲ ಮಾಡಿಕೊಡಲು ಯಡಿಯೂರಪ್ಪ ಅವರು ₨ 40 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಕುರಿತು ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು.ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸಿದ್ದ ಸಿಬಿಐ, ಜಿಂದಾಲ್‌ ಸಮೂಹದ ಸೌತ್‌ವೆಸ್ಟ್ ಮೈನಿಂಗ್‌ ಕಂಪೆನಿಗೆ ಅನುಕೂಲ ಮಾಡಿಕೊಡಲು ₨ 40 ಕೋಟಿ ಲಂಚ ಪಡೆದಿರುವುದು ದೃಢ­ಪಟ್ಟಿದೆ ಎಂದು 2012ರ ಅಕ್ಟೋಬರ್‌ 16ರಂದು ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.ಬಿಎಸ್‌ವೈ, ಅವರ ಪುತ್ರರಾದ ಬಿ.ವೈ.ರಾಘ­­ವೇಂದ್ರ, ಬಿ.ವೈ. ವಿಜ­ಯೇಂ­ದ್ರ, ಅಳಿಯ ಆರ್‌.ಎನ್‌.­ಸೋಹನ್‌ಕುಮಾರ್‌, ಅವರ ಪುತ್ರರು ಮತ್ತು ಅಳಿಯ ಸದಸ್ಯರಾಗಿರುವ ಪ್ರೇರಣಾ ಎಜುಕೇಷನ್‌ ಸೊಸೈಟಿ ಸೇರಿ 13 ಆರೋಪಿಗಳ ವಿರುದ್ಧ ಆರೋಪ­ಪಟ್ಟಿ ಸಲ್ಲಿಸಲಾಗಿತ್ತು.ಬಿಎಸ್‌ವೈ ಅವರು ಪುತ್ರರು ಮತ್ತು ಅಳಿಯ ಸದಸ್ಯರಾಗಿರುವ ಶಿಕ್ಷಣ ಸಂಸ್ಥೆ ಹಾಗೂ ಉದ್ಯಮ ಸಂಸ್ಥೆಯ ಮೂಲಕ ಲಂಚ ಪಡೆ­ದಿರು­ವುದಾಗಿ ಸಿಬಿಐ ಆರೋಪ­ಪಟ್ಟಿ­ಯಲ್ಲಿ ಆಪಾದಿ­ಸಿತ್ತು. ಭ್ರಷ್ಟಾಚಾರ ಪ್ರಕರಣ­ಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಸಲ್ಲಿಸುವ ಆರೋಪಪಟ್ಟಿ­ಯನ್ನು ಆಧರಿಸಿ ಇ.ಡಿ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ನಡೆಸು­ತ್ತದೆ. ಆರ್ಥಿಕ ಅಪರಾಧ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಮೊಕ­ದ್ದಮೆ ಹೂಡಿ, ಆದೇಶ ಪಡೆದು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry