ಬಿಎಸ್‌ವೈ ಇಂದು ಕೋರ್ಟ್ ಮುಂದೆ ಹಾಜರು?

7

ಬಿಎಸ್‌ವೈ ಇಂದು ಕೋರ್ಟ್ ಮುಂದೆ ಹಾಜರು?

Published:
Updated:
ಬಿಎಸ್‌ವೈ ಇಂದು ಕೋರ್ಟ್ ಮುಂದೆ ಹಾಜರು?

ಬೆಂಗಳೂರು: ಡಿನೋಟಿಫಿಕೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 14ರಿಂದ ನ್ಯಾಯಾಂಗ ಬಂಧನದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಂಧನದ ಅವಧಿಯು ಗುರುವಾರಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಅವರು ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಹಾಜರು ಆಗಬೇಕಿದೆ.

 

ಈ ಮೊದಲು ಅವರ ಬಂಧನದ ಅವಧಿಯನ್ನು ಅ.22ರವರೆಗೆ ವಿಸ್ತರಿಸಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಒಡ್ಡಿ ಅವರು ಹಾಜರು ಆಗಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿಯೇ ಬಂಧನದ ಅವಧಿಯನ್ನು ಗುರುವಾರದವರೆಗೆ ವಿಸ್ತರಿಸಿ ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶಿಸಿದ್ದರು.ಅದೇ ರೀತಿ, ಇದೇ ವಿವಾದದಲ್ಲಿ ಸಿಲುಕಿರುವ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರ ಆರೋಪಿಗಳೂ ಗುರುವಾರ ಹಾಜರು ಇರಬೇಕಿದೆ. ಇವರೆಲ್ಲರೂ ಕಳೆದ ಬಾರಿ ಕೋರ್ಟ್‌ಗೆ ಹಾಜರಾಗಿದ್ದರು.ವಿಚಾರಣೆ ಮುಂದೂಡಿಕೆ: ಈ ಮಧ್ಯೆ, ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.ದೂರುದಾರ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ 2ನೇ ದೂರಿಗೆ ಸಂಬಂಧಿಸಿದ ವಿಚಾರಣೆ ಮುಗಿದಿದ್ದು, 3ನೇ ದೂರಿನ ವಿಚಾರಣೆ ಆರಂಭಗೊಂಡಿದೆ. ಇದರ ವಾದ, ಪ್ರತಿವಾದ ಗುರುವಾರ ಮುಗಿಯುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry