ಮಂಗಳವಾರ, ಜನವರಿ 28, 2020
23 °C

ಬಿಎಸ್‌ವೈ ಬಿಜೆಪಿ ಬಿಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆಯುವುದು ಲೇಸು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಲ್ಲಿ ಸೋಮವಾರ ಲೇವಡಿ ಮಾಡಿದರು.ಯುವ ಕಾಂಗ್ರೆಸ್ ಏರ್ಪಡಿಸಿದ್ದ `ಯುವ ಸಂಘರ್ಷ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬಿಜೆಪಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಯಡಿಯೂರಪ್ಪ ತಿಪ್ಪರಲಾಗ ಹಾಕಿದರು ಅವರನ್ನು ಮತ್ತೆ  ಆ ಪಕ್ಷ ಮುಖ್ಯಮಂತ್ರಿ ಮಾಡುವುದಿಲ್ಲ. ಬಿಜೆಪಿಯಿಂದ ಯಡಿಯೂರಪ್ಪ ಅವರನ್ನು ಹೊರಹಾಕುವ ದಿನಗಳು ಹತ್ತಿರಲ್ಲಿವೆ ಎಂದು ಆ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಈ ಸರ್ಕಾರದಲ್ಲಿ ಹಿಂಬದಿ ಸೀಟಿನ ಸವಾರ. ಯಡಿಯೂರಪ್ಪ ಮತ್ತು ಅವರ ಹಿಂಬಾಲಕ ಮಂತ್ರಿಗಳು ಆಡಿಸಿದಂತೆ ಸರ್ಕಾರ ನಡೆಯುತ್ತದೆ. ಇದರಿಂದಾಗಿ ಸದಾನಂದಗೌಡರ ನೀತಿ ನಿರೂಪಣೆಗಳು ಬದಲಾಗುತ್ತವೆ ಎಂದು ಆರೋಪಿಸಿದರು.

 

ಪ್ರತಿಕ್ರಿಯಿಸಿ (+)