ಗುರುವಾರ , ಮೇ 13, 2021
35 °C
ಪಕ್ಷದ ಮುಖಂಡರಿಗೆ ಮಧುಸೂದನ್ ಪತ್ರ

ಬಿಎಸ್‌ವೈ ವಾಪಸು ಕರೆತನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸು ಕರೆ ತರಬೇಕು' ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.ಪತ್ರದ ಪ್ರತಿಗಳನ್ನು ಎಲ್.ಕೆ. ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಸೇರಿದಂತೆ ಎಲ್ಲ ರಾಷ್ಟ್ರೀಯ ಮುಖಂಡರಿಗೆ ಕಳುಹಿಸಿದ್ದಾರೆ. `ಈಗಿನ ವ್ಯವಸ್ಥೆಯೇ ಮುಂದುವರಿದರೆ ಪಕ್ಷ ಮತ್ತೆ ತಲೆ ಎತ್ತುವುದು ಕಷ್ಟ. ವರ್ಷಾಂತ್ಯದಲ್ಲಿ ಲೋಕಸಭಾ ಚುನಾವಣೆ ಬರುವ ಸಾಧ್ಯತೆ ಇದ್ದು, ಅಲ್ಲಿಯೂ ಪಕ್ಷ ಸೋತರೆ ಮತ್ತೆ ಗೆಲ್ಲಲು ಸಾಧ್ಯವಿಲ್ಲ' ಎಂದು ಅವರು ತಿಳಿಸಿದ್ದಾರೆ.`ಪಕ್ಷ ಬಿಟ್ಟು ಹೋಗಿದ್ದ ಕಲ್ಯಾಣ ಸಿಂಗ್, ಉಮಾಭಾರತಿ, ಮದನ್‌ಲಾಲ್ ಖುರಾಲಾ ಅವರಂತಹ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದ ಉದಾಹರಣೆಗಳು ಇವೆ. ಹಾಗೆಯೇ ಯಡಿಯೂರಪ್ಪ ಅವರನ್ನೂ ಪಕ್ಷಕ್ಕೆ ವಾಪಸು ಕರೆತರಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.