ಬಿಎಸ್‌ವೈ ಸೂಚನೆ ಸಚಿವರಿಂದ ಪಾಲನೆ!

7

ಬಿಎಸ್‌ವೈ ಸೂಚನೆ ಸಚಿವರಿಂದ ಪಾಲನೆ!

Published:
Updated:

ಕೊಪ್ಪಳ: ಬಿ.ಎಸ್.ಯಡಿಯೂರಪ್ಪ ಅವರ  `ಆದೇಶ~ವನ್ನು ಸಹಕಾರ ಸಚಿವ ಬಿ.ಜಿ.ಪುಟ್ಟಸ್ವಾಮಿ ಪಾಲಿಸಿದ ಘಟನೆ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಂಗಳವಾರ ಜರುಗಿತು.ಗ್ರಾಮದಲ್ಲಿ ಕೆಎಂಎಫ್ ಹಮ್ಮಿಕೊಂಡಿದ್ದ ನೂತನ ಕೊಪ್ಪಳ ಡೇರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಹೈನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೈತರಿಗೆ ಶೇ 3ರ ಬಡ್ಡಿದರಲ್ಲಿ ಒಂದು ಲಕ್ಷ ರೂಪಾಯಿ ವರೆಗೆ ಸಾಲ ನೀಡಬೇಕು ಎಂದು ಪ್ರತಿಪಾದಿಸಿದರು.ಈ ಬಗ್ಗೆ ಸಹಕಾರ ಸಚಿವ ಪುಟ್ಟಸ್ವಾಮಿ ಅವರು ಇಂತಹ ಸಾಲ ನೀಡುವ ಬಗ್ಗೆ ಇದೇ ವೇದಿಕೆಯಲ್ಲಿ ಪ್ರಕಟಿಸಿದರೆ ಒಳ್ಳೆಯದು. ನಿಮ್ಮ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರು.ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಬಿ.ಜಿ.ಪುಟ್ಟಸ್ವಾಮಿ ಅವರು, `ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಶೇ 3ರ ಬಡ್ಡಿದರದಲ್ಲಿ ಒಂದು ಲಕ್ಷ ರೂಪಾಯಿ ವರೆಗೆ ಸಾಲ ನೀಡುವಂತೆ ನಮ್ಮ ನಾಯಕರು ಆದೇಶ ನೀಡಿದ್ದಾರೆ~ ಎಂದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry