ಬಿಎಸ್‌ವೈ ಸ್ಥಿತಿ: ಸಿದ್ದು ವ್ಯಂಗ್ಯ

7

ಬಿಎಸ್‌ವೈ ಸ್ಥಿತಿ: ಸಿದ್ದು ವ್ಯಂಗ್ಯ

Published:
Updated:

ಮೈಸೂರು:  `ಮತ್ತೆ ಮುಖ್ಯಮಂತ್ರಿ ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಲುವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಈಗ ಸರ್ಕಾರವನ್ನು ಬೀಳಿಸುವುದೊಂದೇ ಯಡಿಯೂರಪ್ಪಗೆ ಉಳಿದಿರುವ ದಾರಿ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.`ಮುಖ್ಯಮಂತ್ರಿ ಬದಲಾವಣೆಗೆ ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತರಾಗಿರುವ ಯಡಿಯೂರಪ್ಪಗೆ ಬೇರೆ ದಾರಿಯೇ ಉಳಿದಿಲ್ಲ. ವಿಧಾನಸಭೆಯಲ್ಲಿ ನೀಲಿಚಿತ್ರ ವೀಕ್ಷಿಸಿದ ಮಾಜಿ ಸಚಿವರನ್ನು ಯಡಿಯೂರಪ್ಪ ಸಮರ್ಥಿಸಿ ಕೊಂಡಿರುವುದು ನಾಚಿಕೆಗೇಡಿನ ಸಂಗತಿ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry