`ಬಿಎಸ್‌ವೈ ಹಿಂಬಾಲಕರ ವಿರುದ್ಧ ಶೀಘ್ರ ಕ್ರಮ'

7

`ಬಿಎಸ್‌ವೈ ಹಿಂಬಾಲಕರ ವಿರುದ್ಧ ಶೀಘ್ರ ಕ್ರಮ'

Published:
Updated:

ಬೀದರ್: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಜೊತೆಗೆ ಗುರುತಿಸಿಕೊಂಡಿರುವ ಬಿಜೆಪಿಯ 14 ಶಾಸಕರು, ವಿಧಾನ ಪರಿಷತ್ತಿನ ಏಳು ಮಂದಿ ಸದಸ್ಯರ ವಿರುದ್ಧ ಒಂದೆರಡು ದಿನದಲ್ಲಿ ಪಕ್ಷವು ಕ್ರಮ ಜರುಗಿಸಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಾಸಕರ ವಿರುದ್ಧ ಕ್ರಮ ಕುರಿತು ಹೈಕಮಾಂಡ್‌ಗೆ ವರದಿ ಕಳುಹಿಸಲಾಗಿದೆ. ಪ್ರತಿಕ್ರಿಯೆ ಆಧರಿಸಿ ಕ್ರಮ ಜರುಗಿಸಲಿದ್ದೇವೆ. ಇದು ಒಂದೆರಡು ದಿನದಲ್ಲಿ ಆಗಬಹುದು' ಎಂದರು.

ಶಾಸಕರ ವಿರುದ್ಧ ಕ್ರಮ ಜರುಗಿಸಿದರೆ ಪಕ್ಷ ಅಧಿಕಾರ ಕಳೆದುಕೊಳ್ಳಬಹುದು ಎಂಬ ಭೀತಿಯೇ ಎಂಬ ಪ್ರಶ್ನೆಗೆ, `ಅಂಥ ಭೀತಿಯೇನೂ ಇಲ್ಲ.

ಪಕ್ಷಕ್ಕೆ ಸಂಖ್ಯಾಬಲದ ಆಧಾರದಲ್ಲಿ ಬಹುಮತವಿದ್ದು, ಅವಧಿ ಪೂರೈಸಲಿದೆ ಎಂದು  ಪ್ರತಿಪಾದಿಸಿದರು.`ಇತಿಹಾಸವನ್ನು ಗಮನಿಸಿದರೆ ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದಲ್ಲಿ ಮನ್ನಣೆ ದೊರಕಿಲ್ಲ. ಮುಖ್ಯವಾಗಿ ಯಡಿಯೂರಪ್ಪ ಅವರು ಭ್ರಷ್ಟಾಚಾರದ ಆರೋಪವನ್ನು ಹೊತ್ತು ಜನರ ಮುಂದೆ ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕು' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry