ಬಿಐಎಎಲ್ ಮೈಲಿಗಲ್ಲು ಐದು ಕೋಟಿ ತಲುಪಿದ ಪ್ರಯಾಣಿಕರ ಸಂಖ್ಯೆ

7

ಬಿಐಎಎಲ್ ಮೈಲಿಗಲ್ಲು ಐದು ಕೋಟಿ ತಲುಪಿದ ಪ್ರಯಾಣಿಕರ ಸಂಖ್ಯೆ

Published:
Updated:

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಬಿಐಎಎಲ್) ಪ್ರಯಾಣ ಬೆಳೆಸಿದವರ ಸಂಖ್ಯೆ ಬುಧವಾರ ಐದು ಕೋಟಿ ತಲುಪಿದ್ದು, ಈ ಮೂಲಕ ಬಿಐಎಎಲ್ ಮೈಲಿಗಲ್ಲು ನಿರ್ಮಿಸಿದೆ.`ಬಿಐಎಎಲ್ ಮೂಲಕ ಐದು ವರ್ಷಗಳಲ್ಲಿ ಐದು ಕೋಟಿ ಮಂದಿ ಪ್ರಯಾಣ ಬೆಳೆಸಿರುವುದು ಮಹತ್ವದ ಸಾಧನೆ. ಆದ್ದರಿಂದ ಈ ದಿನ ನಮಗೆ ಅವಿಸ್ಮರಣೀಯ. ದೇಶಿಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವಂತಹ ಸಾಮರ್ಥ್ಯ ನಮಗಿದೆ' 'ಎಂದು ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ರೆಡ್ಡಿ ಹೇಳಿದ್ದಾರೆ.ಜಗದೀಶ್ ಪುನ್ನ ಎಂಬುವರು ಬುಧವಾರ ಪ್ರಯಾಣ ಬೆಳೆಸುವ ಮೂಲಕ, ಪ್ರಯಾಣಿಕರ ಸಂಖ್ಯೆ ಐದು ಕೋಟಿ ತಲುಪಿದೆ. ಆದ್ದರಿಂದ ಅವರಿಗೆ ಸಿಹಿ ಹಂಚಿ, ಉಡುಗೊರೆ ನೀಡಲಾಯಿತು.ಹೈದರಾಬಾದ್ ಮೂಲದ ಜಿವಿಕೆ ಗ್ರೂಪ್ ಎಂಬ ಕಂಪೆನಿ 2008ರ ಮೇ ತಿಂಗಳಿಂದ ಐದು ಲಕ್ಷ ವಿಮಾನಗಳ ಹಾರಾಟ ಚಟುವಟಿಕೆಯನ್ನು ನಿಯಂತ್ರಿಸಿದೆ. ಅಂತೆಯೇ ಹತ್ತು ಲಕ್ಷ ಸರಕು ಸಾಗಣೆ ವಿಮಾನಗಳ ಹಾರಾಟವನ್ನು ನಿಯಂತ್ರಣ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry