ಬಿಐಎಸ್ ಹಾಲ್‌ಮಾರ್ಕ್: ಮಾರಾಟಗಾರರೂ ಹೊಣೆ?

7

ಬಿಐಎಸ್ ಹಾಲ್‌ಮಾರ್ಕ್: ಮಾರಾಟಗಾರರೂ ಹೊಣೆ?

Published:
Updated:
ಬಿಐಎಸ್ ಹಾಲ್‌ಮಾರ್ಕ್: ಮಾರಾಟಗಾರರೂ ಹೊಣೆ?

ನವದೆಹಲಿ (ಪಿಟಿಐ): `ಹಾಲ್‌ಮಾರ್ಕ್~ ಗುರುತು ಇರುವ ಚಿನ್ನಾಭರಣಗಳಲ್ಲಿ, ಶುದ್ಧತೆ  ಗುಣಮಟ್ಟ ಕಡಿಮೆ ಇರುವುದು ಕಂಡುಬಂದರೆ, ಅದಕ್ಕೆ ಮಾರಾಟ ಮಾಡಿದ ವರ್ತಕರನ್ನೂ  ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತೀಯ ಹಾಲ್‌ಮಾರ್ಕ್ ಕೇಂದ್ರಗಳ ಒಕ್ಕೂಟ (ಐಎಎಚ್‌ಸಿ) ಸರ್ಕಾರಕ್ಕೆ ಆಗ್ರಹಿಸಿದೆ.`ಹಾಲ್‌ಮಾರ್ಕ್~ ಗುರುತು ನಮೂದಿಸಿ ವರ್ತಕರು ಕಳಪೆ ಗುಣಮಟ್ಟದ ಚಿನ್ನಾಭರಣ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗಿರುವ ಹಿನ್ನಲೆಯಲ್ಲಿ `ಐಎಎಚ್‌ಸಿ~ ಈ ಸಲಹೆ ಮಾಡಿದೆ.ಇದುವರೆಗೆ ಇಂತಹ ಪ್ರಕರಣಗಳಲ್ಲಿ ಹಾಲ್‌ಮಾರ್ಕ್ ಗುರುತು ನೀಡಿದ ಕೇಂದ್ರಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು. ಆದರೆ, ಚಿನ್ನದ ಶುದ್ಧತೆಯು ಭಾರತೀಯ ಮಾನಕ ಮಂಡಳಿ (ಬಿಐಎಸ್) ನಿಗದಿಪಡಿಸಿರುವ ಮಾನದಂಡಕ್ಕಿಂತ ಕಡಿಮೆ ಇರುವುದು ಮರು ಪರೀಕ್ಷೆ ವೇಳೆ ಪತ್ತೆಯಾದರೆ, ಅದಕ್ಕೆ ವರ್ತಕರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಮಾರಾಟಗಾರರು ತಮ್ಮ  ಆಭರಣಗಳ ಸಾಚಾತನ ಧೃಡೀಕರಿಸಲಿ ಎಂದು `ಐಎಎಚ್‌ಸಿ~ ಸಮಿತಿ ಕಾರ್ಯದರ್ಶಿ ಜೇಮ್ಸ ಜೋಸ್, ಗ್ರಾಹಕ ವ್ಯವಹಾರಗಳ ಸಚಿವ ಕೆ.ವಿ ಥಾಮಸ್ ಅವರಿಗೆ  ಮನವಿ ಮಾಡಿದ್ದಾರೆ.`ಕೆಲವು ಚಿನ್ನಾಭರಣ ವ್ಯಾಪಾರಿಗಳು ಮತ್ತು ಅಕ್ಕಸಾಲಿಗರು, ಹೆಚ್ಚಿನ ಹಣದ ಆಸೆಯಿಂದ `ಹಾಲ್‌ಮಾರ್ಕ್~ ಗುರುತು  ಇರುವ ಆಭರಣಗಳಿಗೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು  ಸೇರಿಸಿ ಮಾರಾಟ ಮಾಡುತ್ತಿದ್ದಾರೆ.ಇಂತಹ ಆಭರಣಗಳ ಶುದ್ಧತೆ ಗುಣಮಟ್ಟ ತುಂಬಾ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಚಿನ್ನಾಭರಣ ವ್ಯಾಪಾರಿಗಳಿಂದ `ಬಿಐಎಸ್ ಹಾಲ್‌ಮಾರ್ಕ್~ ಗುರುತು ಇರುವ ಆಭರಣಗಳನ್ನು ಪಡೆದು, ಮರು ಪರೀಕ್ಷಿಸಿದ ಸಂದರ್ಭದಲ್ಲಿ ಗುಣಮಟ್ಟ ಕಡಿಮೆ ಇರುವುದು ಪತ್ತೆಯಾದರೆ, ಇದುವರೆಗೆ  ಗುರುತು ನೀಡಿದ ಸಂಸ್ಥೆಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು.ಆದರೆ, ಈಗ ವರ್ತಕರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಹಾಲ್‌ಮಾರ್ಕ್ ಗುರುತು ಇರುವ ಆಭರಣಗಳ ಸಾಚಾತನ ಪರೀಕ್ಷಿಸಲು ಮತ್ತು ಇದರ ಮೇಲೆ ನಿಗಾ ವಹಿಸಲು ಸರ್ಕಾರ ಪ್ರತ್ಯೇಕ ಸಂಸ್ಥೆಯೊಂದನ್ನು ನೇಮಕ ಮಾಡಬೇಕು ಎಂದೂ ಜೇಮ್ಸ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry