ಬಿಕಿನಿ ಒಲ್ಲೆನೆಂದ ಸೋನಾಕ್ಷಿ

7

ಬಿಕಿನಿ ಒಲ್ಲೆನೆಂದ ಸೋನಾಕ್ಷಿ

Published:
Updated:
ಬಿಕಿನಿ ಒಲ್ಲೆನೆಂದ ಸೋನಾಕ್ಷಿ

`ನಾನು ಬಿಕಿನಿ ತೊಟ್ಟು ಕ್ಯಾಮೆರಾ ಎದುರಿಸಲಾರೆ... ಅಷ್ಟೊಂದು ಧೈರ್ಯ ನನಗಿಲ್ಲ~- ಹೀಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.`ಸಿನಿಮಾಗೆ ಬರುವಾಗ ನನ್ನ ಸ್ವಭಾವಕ್ಕೆ ಅನುಗುಣವಾಗಿ ಕೆಲವು ನಿಯಮಗಳನ್ನು ರೂಪಿಸಿಕೊಂಡಿದ್ದೇನೆ. ಅದರಲ್ಲಿ ಬಿಕಿನಿ ಧರಿಸಲಾರೆನೆಂಬುದೂ ಒಂದು~ ಎಂಬುದು ಸೋನಾಕ್ಷಿಯ ನಿಲುವು.ಮೊದಲ ಚಿತ್ರದಲ್ಲಿ ಗ್ರಾಮೀಣ ಪ್ರದೇಶದ ಯುವತಿಯಂತೆ ಉಡುಪು ಧರಿಸಿದ್ದ ಸೋನಾಕ್ಷಿ, ರೌಡಿ ರಾಥೋಡ್ ಚಿತ್ರದಲ್ಲಿಯೂ ಪಾರೊ ಪಾತ್ರ ನಿರ್ವಹಿಸುತ್ತಿದ್ದಾರೆ.ಚಿತ್ರೀಕರಣಕ್ಕೆ ಸಂಬಂಧಿಸಿದ ಇನ್ನೊಂದು ನಿಯಮವೆಂದರೆ ಶೃಂಗಾರದ ದೃಶ್ಯಗಳಲ್ಲಿ ಸೋನಾಕ್ಷಿಗೆ ನಟಿಸಲಾಗುವುದಿಲ್ಲವಂತೆ.`ಈಗಾಗಲೇ ಪ್ರೇಕ್ಷಕರು ನನ್ನನ್ನು ಮೈಮುಚ್ಚುವ ಉಡುಪಿನಲ್ಲಿ ಸ್ವೀಕರಿಸಿದ್ದಾರೆ. ಇನ್ನು ಆ ಇಮೇಜ್‌ನಿಂದ ಆಚೆ ಬರುವ ಅಗತ್ಯವೇ ನನಗಿಲ್ಲ. ನಾನು ಬೆಳೆದ ಪರಿಸರದಿಂದಾಗಿ, ನನ್ನವೇ ಆದ ಕೆಲವು ನಿರ್ಬಂಧನೆಗಳೂ ಇವೆ. ಪ್ರೇಮಸಲ್ಲಾಪದ ಹೆಚ್ಚು ದೃಶ್ಯಗಳಲ್ಲಿ ನಟಿಸಲಾರೆ~ ಎಂದು ಸ್ಪಷ್ಟಪಡಿಸಿದ್ದಾರೆ.ಇಪ್ಪತ್ತನಾಲ್ಕು ವರ್ಷದ ಈ ಯುವತಿ `ಡರ್ಟಿ ಪಿಕ್ಚರ್~ ಚಿತ್ರ ವೀಕ್ಷಿಸಿ, ವಿದ್ಯಾಬಾಲನ್ ನಟನೆಯನ್ನು ಮನಸಾರೆ ಹೊಗಳಿದ್ದಾರೆ. ತಾವು ವಿದ್ಯಾ ಅಭಿಮಾನಿಯೆಂದೂ ಹೇಳಿಕೊಂಡಿದ್ದಾರೆ.`ತೆರೆಯ ಮೇಲೆ ಮಾದಕವಾಗಿ ಕಾಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂಥ ಬಟ್ಟೆಗಳಲ್ಲಿ ಮೈಮಾಟ ತೋರಿಸುವುದು ನನಗಂತೂ ಸಾಧ್ಯವೇ ಇಲ್ಲ. ಅಷ್ಟೊಂದು ಧೈರ್ಯವೇ ನನಗಿಲ್ಲ~ ಎಂದೂ ಮಾತು ಸೇರಿಸಿದ್ದಾರೆ.ಭಾರತೀಯ ಉಡುಪುಗಳು ತಮ್ಮ ಅಂಗಸೌಷ್ಠವಕ್ಕೆ ಒಪ್ಪುತ್ತವೆ. ಚಿತ್ರದ ಪಾತ್ರಗಳನ್ನು ಉಡುಪುಗಳಿಂದ ತೀರ್ಮಾನಿಸುವುದಿಲ್ಲ. ನಿರ್ವಹಿಸಬಲ್ಲೆ ಎನ್ನುವ ಅವರು ವಿಶ್ವಾಸ ಇದ್ದರೆ ಮಾತ್ರ ಪಾತ್ರ ಒಪ್ಪಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

`ಇದಿನ್ನೂ ಚಿತ್ರೋದ್ಯಮದಲ್ಲಿ ಎರಡನೇ ವರ್ಷ. ಸದ್ಯ ದೊರಕಿರುವ ಪಾತ್ರಗಳಿಂದ ಸಂತೋಷವಿದೆ. ಆಧುನಿಕ ಉಡುಗೆಗಳನ್ನು ತೊಡಲು ಸಾಕಷ್ಟು ಅವಕಾಶಗಳಿವೆ.ಜಾಹೀರಾತು, ಸಮಾರಂಭ, ದಿನನಿತ್ಯದ ಬದುಕು ಹೀಗೆ. ಗ್ರಾಮೀಣ ಸೊಗಡಿನಲ್ಲಿ ಕಾಣಿಸಿಕೊಳ್ಳುವುದು ನನಗೂ ಇಷ್ಟ. ಪ್ರೇಕ್ಷಕರಿಗೂ ಇಷ್ಟವಾದಂತಿದೆ. ಸದ್ಯ ಈಗಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನಿರತಳಾಗಿದ್ದೇನೆ~ ಎನ್ನುತ್ತಾರೆ.ತಮ್ಮ ನಿಲುವಿನ ಬಗ್ಗೆ ಇಷ್ಟೆಲ್ಲ ಮುಕ್ತವಾಗಿ ಹೇಳಿದಾಗಲೂ ಸೋನಾಕ್ಷಿಗೆ ಅವಕಾಶಗಳ ಕೊರತೆಯಾಗಿಲ್ಲವಂತೆ. ಆ ನಿಟ್ಟಿನಲ್ಲಿ ತಾವು ಅದೃಷ್ಟವಂತರು ಎಂದೂ ಹೇಳಿಕೊಳ್ಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry