ಬಿಕ್ರಂ ಸಿಂಗ್ ಭೂ ಸೇನಾ ಮುಖ್ಯಸ್ಥ

7

ಬಿಕ್ರಂ ಸಿಂಗ್ ಭೂ ಸೇನಾ ಮುಖ್ಯಸ್ಥ

Published:
Updated:
ಬಿಕ್ರಂ ಸಿಂಗ್ ಭೂ ಸೇನಾ ಮುಖ್ಯಸ್ಥ

ನವದೆಹಲಿ (ಪಿಟಿಐ): ಸೇನಾಪಡೆಯ 25ನೇ ಮುಖ್ಯಸ್ಥರಾಗಿ ಜನರಲ್ ಬಿಕ್ರಂ ಸಿಂಗ್ ಗುರುವಾರ ಅಧಿಕಾರ ವಹಿಸಿಕೊಂಡರು.ಜನರಲ್ ವಿ.ಕೆ.ಸಿಂಗ್ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನೇಮಕಗೊಂಡಿರುವ 59 ವರ್ಷದ ಬಿಕ್ರಂ ಸಿಂಗ್ ಅವರ ಅಧಿಕಾರಾವಧಿ ಎರಡು ವರ್ಷ ಮೂರು ತಿಂಗಳು.ಈ ಮುನ್ನ ಅವರು ಕೋಲ್ಕತ್ತ ಕೇಂದ್ರವಾಗಿರುವ ಪೂರ್ವ ಸೇನಾ ಕಮಾಂಡ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಸ್ನೇಹಿತರಿಂದ `ಬಿಕ್ಕಿ~ ಎಂದು ಕರೆಸಿಕೊಳ್ಳುವ ಬಿಕ್ರಂ, 1972ರ ಮಾರ್ಚ್ 31ರಂದು ಸಿಖ್ ಲಘು ಪದಾತಿದಳಕ್ಕೆ ಸೇರ್ಪಡೆಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry