ಬಿಕ್ರಮ್ ಸಿಂಗ್ ಭೂ ಸೇನಾ ನೂತನ ಮುಖ್ಯಸ್ಥ

7

ಬಿಕ್ರಮ್ ಸಿಂಗ್ ಭೂ ಸೇನಾ ನೂತನ ಮುಖ್ಯಸ್ಥ

Published:
Updated:
ಬಿಕ್ರಮ್ ಸಿಂಗ್ ಭೂ ಸೇನಾ ನೂತನ ಮುಖ್ಯಸ್ಥ

ನವದೆಹಲಿ, (ಪಿಟಿಐ): ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಕ್ರಮ್ ಸಿಂಗ್ ಗುರುವಾರ ಭಾರತೀಯ ಭೂ ಸೇನೆಯ 25ನೇ ನೂತನ ಮುಖ್ಯಸ್ಥರಾಗಿ ನೇಮಕಗೊಂಡರು.2010ರ ಮಾಚ್ 31ರಂದು ಭೂಸೇನೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ಸರ್ಕಾರದೊಂದಿಗೆ ಸಂಘರ್ಷ, ಜನ್ಮ ದಿನಾಂಕ ತಿದ್ದುಪಡಿ, ಪ್ರಧಾನಿಗೆ ಬರೆದ ರಹಸ್ಯ ಪತ್ರ ಸೋರಿಕೆ... ಹೀಗೆ ತಮ್ಮ ಅಧಿಕಾರ ಅವಧಿಯ ಉದ್ದಕ್ಕೂ ಒಂದಾದ ನಂತರ ಒಂದು ವಿವಾದಕ್ಕೆ ಕಾರಣರಾಗುತ್ತಲೇ ಬಂದ ಭೂಸೇನೆ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ (62) ಅವರು ಗುರುವಾರ ತಮ್ಮ 26 ತಿಂಗಳ ಸೇವಾವಧಿಯನ್ನು ಪೂರ್ಣಗೊಳಿಸಿದರು. ಇದರ ಬೆನ್ನಲ್ಲಿಯೇ ಬಿಕ್ರಮ್ ಸಿಂಗ್ ಅವರು ನೇಮಕವಾದರು.

59 ವರ್ಷದ ಪೂರ್ವ ಸೇನಾ ಕಮಾಂಡರ್ ಜನರಲ್ ಬಿಕ್ರಮ್ ಸಿಂಗ್ ಅವರು ವಿ.ಕೆ.ಸಿಂಗ್ ಅವರಿಂದ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 1.3 ದಶಲಕ್ಷ ಯೋಧರನ್ನು ಒಳಗೊಂಡ ಪ್ರಪಂಚದ ಬಲಿಷ್ಠ ಸೇನೆಗೆ ಅವರು ಎರಡು ವರ್ಷ ಮೂರು ತಿಂಗಳ ಅವಧಿವರೆಗೆ ಮುಖ್ಯಸ್ಥರಾಗಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry