ಸೋಮವಾರ, ಮೇ 17, 2021
23 °C

ಬಿಗ್‌ಎಫ್‌ಎಂನಲ್ಲಿ ಗಣೇಶ್ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಗ್‌ಎಫ್‌ಎಂನಲ್ಲಿ ಗಣೇಶ್ ಮಾತು

ಮುಂಗಾರು ಮಳೆ ಖ್ಯಾತಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಚಿತ್ರ `ಆಟೋ ರಾಜ' ಸಿನಿಮಾ ಪ್ರಚಾರಕ್ಕೆಂದು ಈಚೆಗೆ ಬಿಗ್ ಎಫ್‌ಎಂ ಸ್ಟುಡಿಯೊಗೆ ಭೇಟಿ ನೀಡಿದ್ದರು.ಆರ್‌ಜೆ ಶ್ರುತಿ ಜತೆಗೆ ತಾವು ಕೂಡ ಆರ್‌ಜೆ ಅಂಗಿ ತೊಟ್ಟು ರೇಡಿಯೊ ಕೇಳುಗರೊಂದಿಗೆ `ಆಟೋ ರಾಜ' ಚಿತ್ರದ ಅನುಭವಗಳನ್ನು ಹಂಚಿಕೊಂಡರು. ಅಭಿಮಾನಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಲವ್‌ಸ್ಟೋರಿ, ಆ್ಯಕ್ಷನ್ ಹಾಗೂ ಕಾಮಿಡಿ ಚಿತ್ರಗಳಲ್ಲಿ ನಟಿಸಿದ ತಮ್ಮ ಅನುಭವ ಹಂಚಿಕೊಂಡರು.`ಆಟೋ ರಾಜ ಚಿತ್ರ ನಾನು ಈ ಹಿಂದೆ ನಟಿಸಿದ ಎಲ್ಲ ಚಿತ್ರಗಳಿಗಿಂತಲೂ ಭಿನ್ನವಾದುದು. ಒಬ್ಬ ಆಟೋ ಚಾಲಕ ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ, ತನ್ನ ಆಟೋ ಬಗ್ಗೆ ಎಷ್ಟು ಪ್ರೀತಿ ಹೊಂದಿರುತ್ತಾನೆ ಎಂಬುದು ಕಥೆಯ ತಿರುಳು' ಎಂದರು.`ಮೊದಲನೆಯದಾಗಿ ಆಟೋ ಡ್ರೈವರ್ ಪಾತ್ರ ನಿರ್ವಹಿಸುತ್ತಿರುವುದು ನನಗೆ ಖುಷಿತಂದಿದೆ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆಟೋ ರಾಜ ಅಂದರೆ ನಮ್ಮೆಲ್ಲರಿಗೂ ಶಂಕರ್‌ನಾಗ್ ನೆನಪಾಗುತ್ತಾರೆ. ಆಟೋ ಚಾಲಕರ ಬಗ್ಗೆ ಪ್ರಯಾಣಿಕರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಎಂಬ ಮಾತಿದೆ. ಅವರು ಪ್ರಯಾಣಿಕರೊಂದಿಗೆ ತುಂಬಾ ಒರಟಾಗಿ ನಡೆದುಕೊಳ್ಳುತ್ತಾರೆ, ಪ್ರಾಮಾಣಿಕರಲ್ಲ ಎಂಬ ದೂರುಗಳೂ ಇವೆ. ಆದರೆ ಈ ಚಿತ್ರ ಆಟೋ ಚಾಲಕರ ಹೃದಯವಂತಿಕೆಯನ್ನು ತೋರುವ ಭಿನ್ನ ಸಿನಿಮಾ. ಪ್ರತಿಯೊಬ್ಬ ಆಟೋ ಚಾಲಕನೂ ನೋಡಲೇಬೇಕಾದ ಚಿತ್ರ' ಎಂದರು ಗಣೇಶ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.