ಬುಧವಾರ, ಜನವರಿ 22, 2020
22 °C

ಬಿಗ್‌ಬಜಾರ್: ಉಳಿತಾಯ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಗ್ ಬಜಾರ್, ಪ್ರಸಕ್ತ ವರ್ಷದ 5 ದಿನಗಳ ಉಳಿತಾಯ ಉತ್ಸವವನ್ನು (ಸಬ್ಸೆ ಸಸ್ತೆ 5 ದಿನ್)  ಜ. 25ರಿಂದ 29ರವರೆಗೆ ಆಯೋಜಿಸಿದೆ. 



ದೇಶದ 85 ನಗರಗಳಲ್ಲಿರುವ 200 ಬಿಗ್ ಬಜಾರ್ ಮತ್ತು ಫುಡ್ ಬಜಾರ್  ಮಳಿಗೆಗಳಲ್ಲಿ ಗ್ರಾಹಕರು ಈ ಐದು ದಿನಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸರಕುಗಳನ್ನು ಖರೀದಿಸಬಹುದು.  ಎಲೆಕ್ಟ್ರಾನಿಕ್ಸ್, ಆಹಾರ ಪದಾರ್ಥಗಳು,  ಬಟ್ಟೆ, ಮೊಬೈಲ್, `ಎಫ್‌ಎಂಸಿಜಿ~ ಸರಕುಗಳ ಮೇಲೆ ಭರ್ಜರಿ ರಿಯಾಯ್ತಿ ಲಭ್ಯವಿದೆ ಎಂದು ಬಿಗ್‌ಬಜಾರ್‌ನ ದಕ್ಷಿಣ ವಲಯ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮಂಗಳವಾರ ಇಲ್ಲಿ ತಿಳಿಸಿದರು.



`ಇದು 6ನೇ ವರ್ಷದ ಉಳಿತಾಯ ಉತ್ಸವ. ಐದು ದಿನಗಳ ಈ ವಿಶೇಷ ಮೇಳದಲ್ಲಿ ಉಳಿದ ದಿನಗಳಿಗಿಂತ ಮೂರುಪಟ್ಟು ಹೆಚ್ಚಿನ ವಹಿವಾಟು ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು. ಬಿಗ್ ಬಜಾರ್‌ನ ನೂತನ ಮಳಿಗೆ ರಾಜಾಜಿನಗರದಲ್ಲಿ ಪ್ರಾರಂಭವಾಗಲಿದ್ದು, ಫೆಬ್ರುವರಿ ಮೊದಲ ವಾರದಿಂದ ಗ್ರಾಹಕರಿಗೆ ಮುಕ್ತವಾಗಲಿದೆ ಎಂದು ಪ್ರಸಾದ್ ತಿಳಿಸಿದರು.

ಪ್ರತಿಕ್ರಿಯಿಸಿ (+)