ಗುರುವಾರ , ನವೆಂಬರ್ 21, 2019
26 °C

ಬಿಗ್‌ಬಾಸ್‌ನಲ್ಲಿ `ಬಚ್ಚನ್' ಸಿ.ಡಿ

Published:
Updated:

ಶಶಾಂಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `ಬಚ್ಚನ್' ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ಸುದೀಪ್ ನಿರೂಪಕರಾಗಿರುವ `ಬಿಗ್‌ಬಾಸ್ ಸ್ಟುಡಿಯೋ'ದಲ್ಲಿ ನೆರವೇರಿತು.ಚಿತ್ರದ ಮೂರು ಹಾಡುಗಳಿಗೆ ನಾಯಕ ಸುದೀಪ್ ಹಾಗೂ ನಾಯಕಿ ಪಾರೂಲ್ ಯಾದವ್ ಹೆಜ್ಜೆ ಹಾಕಿದರು. ನಿರ್ಮಾಪಕ ಉದಯ್ ಕೆ.ಮೆಹ್ತಾ, ನಿರ್ದೇಶಕ ಶಶಾಂಕ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಸಂದರ್ಭದಲ್ಲಿ ಹಾಜರಿದ್ದರು.ಸುದೀಪ್, ಪಾರೂಲ್ ಯಾದವ್, ಟುಲಿಪ್ ಜೋಷಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ.

ಪ್ರತಿಕ್ರಿಯಿಸಿ (+)