ಬಿಗ್ ಕನ್ನಡ ಪ್ರತಿಭಾ ಪ್ರಶಸ್ತಿ

ಶನಿವಾರ, ಜೂಲೈ 20, 2019
27 °C

ಬಿಗ್ ಕನ್ನಡ ಪ್ರತಿಭಾ ಪ್ರಶಸ್ತಿ

Published:
Updated:

ಅನಿಲ್ ಅಂಬಾನಿ ಸಮೂಹಕ್ಕೆ ಸೇರಿದ ರಿಲಯನ್ಸ್ ಬ್ರಾಡ್‌ಕಾಸ್ಟ್‌ನ 92.7 ಬಿಗ್ ಎಫ್‌ಎಂ, ಇದೀಗ ಕನ್ನಡ ಸಿನಿಮಾ ಮತ್ತು ಕಿರುತೆರೆಯ `ಇಂದಿನ ಸ್ಟಾರ್; ನಾಳಿನ ಸೂಪರ್ ಸ್ಟಾರ್~ಗಳಿಗೆ `ಬಿಗ್ ಕನ್ನಡ ನೂತನ ಪ್ರತಿಭಾ ಪುರಸ್ಕಾರ~ ನೀಡಲಿದೆ.ಕಳೆದ 3-4 ವರ್ಷಗಳಿಂದ ಸಿನಿಮಾ, ಟಿವಿಯ ಅಭಿನಯ, ಸಂಗೀತ, ಹಾಡು, ನಿರೂಪಣೆ ಕ್ಷೇತ್ರದಲ್ಲಿ ತಮ್ಮ ಸಾಧನೆ ಪ್ರದರ್ಶಿಸುತ್ತಿರುವ ಅಪ್ಪಟ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಶಿಫಾರಸ್ಸು ಮಾಡಲು ರಾಘವೇಂದ್ರ ರಾಜಕುಮಾರ್, ರಾಜೇಶ್ ಕೃಷ್ಣನ್, ಮನೋ ಮೂರ್ತಿ, ಜಗ್ಗೇಶ್ ಮತ್ತು ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರುಳ್ಳ ತೀರ್ಪುಗಾರರ ಸಮಿತಿ  ರಚನೆಯಾಗಿದೆ.ಇದಲ್ಲದೇ ಸಾರ್ವಜನಿಕರು ಕೂಡ ಮತ ಚಲಾಯಿಸಿ ತಮ್ಮ ಅಭಿಪ್ರಾಯ ತಿಳಿಸಬಹುದು. ಇದಕ್ಕಾಗಿ ಸದ್ಯದಲ್ಲಿಯೇ ಬಿಗ್ ವಾಹನವೊಂದು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ ಎಂದು ವಿವರಿಸುತ್ತಾರೆ ಬಿಗ್ ಲೈವ್ ಮತ್ತು ಬಿಗ್ ಸ್ಟ್ರೀಟ್‌ನ ವ್ಯವಹಾರ ವಿಭಾಗದ ಮುಖ್ಯಸ್ಥ ರಾಬೆ ಟಿ ಅಯ್ಯರ್.ಬಿಗ್ ಟಿವಿ ಈ ಮೂಲಕ ಸಿನಿಮಾ, ಕಿರುತೆರೆ ಪ್ರತಿಭೆಗಳಿಗೆ ವೇದಿಕೆ, ಒಂದೆಡೆ ಸೇರಲು ಅವಕಾಶ ಕಲ್ಪಿಸುತ್ತಿರುವುದು ಸಂತಸದ ಸಂಗತಿ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್.ಪರಭಾಷೆ ಗಾಯಕ ಗಾಯಕಿಯರಿಗಿಂತ ಕನ್ನಡದ ಕಂಠಸಿರಿಗಳಿಗೆ ಪ್ರೋತ್ಸಾಹ ಕೊಡಬೇಕು. ಅಂಥ ಪ್ರಯತ್ನ ಈ ಮೂಲಕ ಆರಂಭವಾಗಿದೆ ಎನ್ನುವುದು ರಾಜೇಶ್ ಕೃಷ್ಣನ್ ವಿಶ್ಲೇಷಣೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry