ಗುರುವಾರ , ಜನವರಿ 23, 2020
22 °C

ಬಿಗ್-ಬಿಗೆ ಪೆಡಿಕ್ಯೂರ್ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣುಮಕ್ಕಳು ಅದ್ಯಾಕೆ ಬ್ಯೂಟಿ ಪಾರ್ಲರ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಈಗ ಗೊತ್ತಾಯಿತು ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಜೀವನದಲ್ಲಿ ಮೊದಲ ಸಲ ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಮಾಡಿಸಿಕೊಂಡಿರುವ ಅಮಿತಾಬ್ ಬಚ್ಚನ್ ಉಗುರು ಸಂರಕ್ಷಣೆ, ಕೈ-ಕಾಲುಗಳ ಸೌಂದರ್ಯ ಮತ್ತು ಸ್ವಾಸ್ಥ್ಯದ ಬಗ್ಗೆಯೂ ಬರೆದಿದ್ದಾರೆ.

ಆರಾಮದಾಯಕ ಆಸನದಲ್ಲಿ ಕುಳಿತು, ಟೀವಿ ನೋಡುತ್ತ, ಇನ್ನೊಬ್ಬರಿಂದ ಕೈ-ಕಾಲುಗಳನ್ನು ಮೃದುವಾದ ಆರೈಕೆ ಮಾಡಿಸಿಕೊಂಡು ಸ್ವಚ್ಛಗೊಳ್ಳುವ ಸುಖದಾನಂದವೇ ಬೇರೆ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)