ಶುಕ್ರವಾರ, ನವೆಂಬರ್ 22, 2019
26 °C

ಬಿಜೆಪಿಗೆ ಜನರಿಂದ ತಕ್ಕ ಪಾಠ: ಪುರಂದೇಶ್ವರಿ

Published:
Updated:

ಚಿಕ್ಕಬಳ್ಳಾಪುರ: `ಬಿಜೆಪಿ ಸರ್ಕಾರವು ಐದು ವರ್ಷಗಳ ಆಡಳಿತಾವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲಿ ಭಾಗಿಯಾಯಿತೇ ಹೊರತು ಜನರ ಪರ ಯೋಜನೆ ರೂಪಿಸಲಿಲ್ಲ' ಎಂದು ಕೇಂದ್ರ ಸಚಿವೆ ಪುರಂದೇಶ್ವರಿ ದೇವಿ ಆರೋಪಿಸಿದರು.ನಗರದಲ್ಲಿ ಬುಧವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ  ಮಾತನಾಡಿದ ಅವರು, `ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸರಗೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ' ಎಂದರು. `ಬಿಜೆಪಿ ಸರ್ಕಾರ ಮುಖ್ಯಮಂತ್ರಿಯಲ್ಲದೇ ಸಚಿವರು ಕೂಡ ಜೈಲುವಾಸ ಅನುಭವಿಸಿದ್ದಾರೆ.ಸರ್ಕಾರದಲ್ಲಿ ಇದ್ದವರೇ ಕಳಂಕಿತರು ಆಗಿರುವಾಗ, ಉತ್ತಮ ಮತ್ತು ಜನಪರ ಆಡಳಿತ ಹೇಗೆ ನಿರೀಕ್ಷಿಸಲು ಸಾಧ್ಯ? ಬಿಜೆಪಿಯು ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ' ಎಂದು ತಿಳಿಸಿದರು.ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)