ಬಿಜೆಪಿಗೆ ಮಾಜಿ ಸಚಿವ ಗುರುಪಾದಪ್ಪ ರಾಜೀನಾಮೆ

7

ಬಿಜೆಪಿಗೆ ಮಾಜಿ ಸಚಿವ ಗುರುಪಾದಪ್ಪ ರಾಜೀನಾಮೆ

Published:
Updated:

ಬೀದರ್: ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ  ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.ಪ್ರಭಾವಿ ರಾಜಕಾರಣಿಯಾಗಿರುವ ನಾಗಮಾರಪಳ್ಳಿ ಅವರ ಈ ನಿರ್ಧಾರದೊಂದಿಗೆ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾದಂತಾಗಿದೆ. ಅವರು ಔರಾದ್ ಕ್ಷೇತ್ರದಿಂದ ನಾಲ್ಕು ಬಾರಿ ಮತ್ತು ಬೀದರ್ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry