ಬಿಜೆಪಿಗೆ ಮೊದಲ ಪೆಟ್ಟು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಂಕೇಶ್ವರ ರಾಜೀನಾಮೆ

7

ಬಿಜೆಪಿಗೆ ಮೊದಲ ಪೆಟ್ಟು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಂಕೇಶ್ವರ ರಾಜೀನಾಮೆ

Published:
Updated:

ಬೆಳಗಾವಿ (ಪಿಟಿಐ): ವಿಜಯ ಸಂಕೇಶ್ವರ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ ರಾಜ್ಯದ ಆಡಳಿತಾರೂಢ ಬಿಜೆಪಿಯು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪನೆ ಬಳಿಕ ಮೊದಲ ಹಿನ್ನಡೆಯನ್ನು ಮಂಗಳವಾರ ಅನುಭವಿಸಿತು.ವಿಜಯ ಸಂಕೇಶ್ವರ ಅವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಈದಿನ ಸದನದಲ್ಲಿ ಪ್ರಕಟಿಸಿದರು.ಮುಂಚೂಣಿಯ ಸಾರಿಗೆ ಸಂಸ್ಥೆಯ ಮಾಲೀಕರಾದ ಸಂಕೇಶ್ವರ ದಿನಪತ್ರಿಕೆಯನ್ನೂ ಪ್ರಕಟಿಸುತ್ತಿದ್ದಾರೆ.ಉತ್ತರ ಕರ್ನಾಟಕದ ಪ್ರಮುಖ ನಾಯಕರಲ್ಲಿ ಒಬ್ಬರಾದ ಸಂಕೇಶ್ವರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೂತನ ಕರ್ನಾಟಕ ಜನತಾ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry