ಬಿಜೆಪಿಯಿಂದ ಅಧಿಕಾರ ಕಸಿಯಲು ‘ಕೈ’ತಂತ್ರ

7
ಜಿ.ಪಂ:ಅವಿಶ್ವಾಸ ಗೊತ್ತುವಳಿ ಮಂಡನೆ ಇಂದು

ಬಿಜೆಪಿಯಿಂದ ಅಧಿಕಾರ ಕಸಿಯಲು ‘ಕೈ’ತಂತ್ರ

Published:
Updated:

ಗುಲ್ಬರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಸೋಮವಾರ ಮಂಡಿಸಲಾಗುತ್ತಿದ್ದು, ಬಿಜೆಪಿಯಿಂದ ಅಧಿಕಾರ ಕಸಿಯಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ.ಅಧ್ಯಕ್ಷ ಶರಣಪ್ಪ ವಿ.ಪೊಲೀಸ್‌­ಪಾಟೀಲ ಹಾಗೂ ಉಪಾದ್ಯಕ್ಷೆ ಪಾರ್ವತಿ ಚವ್ಹಾಣ ಅವರ ವಿರುದ್ಧ ಬಿಜೆಪಿಯವರೇ ಎಂಟು ಸದಸ್ಯರು ಅವಿಶ್ವಾಸ ಮಂಡಿಸುವ ಪತ್ರಕ್ಕೆ ಸಹಿ ಹಾಕಿರುವುದು ಹೊಸ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ.ಒಟ್ಟು 43 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ 19 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ 20 ಸದಸ್ಯ ಬಲ ಹೊಂದಿರುವ ಬಿಜೆಪಿಯಿಂದ ಅಧಿಕಾರ ತಪ್ಪಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇರುವುದು ಈ ಬೆಳವಣಿಗೆಗೆ ಇನ್ನಷ್ಟು ಪುಷಿ್ಟಿ ನೀಡಿದೆ.ಕಾಂಗ್ರೆಸ್‌ನ 19 ಸದಸ್ಯರ ಪೈಕಿ, ಇಬ್ಬರು ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಅವರನ್ನು ಪಕ್ಷ ಹೊರಹಾಕಿದೆ.ಆದರೆ, ಹೊರಬಿದ್ದ ಸದಸ್ಯರಾದ ಪುಷ್ಪಾವತಿ ರೆಡ್ಡಿ ಹಾಗೂ ಸಾಬಣ್ಣ ಅವರು ಕಾಂಗ್ರೆಸ್‌ ನಿಲುವು ಬೆಂಬಲಿಸುತ್ತಾರೆ ಎನ್ನಲಾಗುತ್ತಿದೆ.ಆದರೆ, ಕಾಂಗ್ರೆಸ್‌ ಪಕ್ಷ ಅವರ ಬೆಂಬಲ ಪಡೆಯುವ ಖಚಿತ ನಿಲುವು ತಳೆದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಅವರ ಕಾರ್ಯವೈಖರಿ ವಿರುದ್ಧ ಸಿಡಿದೆದ್ದ ಬಿಜೆಪಿಯ ಎಂಟು ಸದಸ್ಯರು ಒಟ್ಟಾಗಿ ‘ಬಿಜೆಪಿ ಅಭಿವೃದ್ಧಿ ರಂಗ’ ರಚಿಸಿಕೊಂಡಿದ್ದು, ಅದರಲ್ಲಿ ಜಗಜೀವನ ರೆಡ್ಡಿ, ರೇಣುಕಾ ಗಂಗಾರಾಮ ಹಾಗೂ ಸುನಂದಾ ಕೊರವಿ ಮೂವರು ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.ಮೂವರು ಸದಸ್ಯ ಬಲದ ಜೆಡಿಎಸ್‌ ಪಕ್ಷದಿಂದ ಜಯಶ್ರೀ ಸಾವಳೇಶ್ವರ ಹಾಗೂ ಹರ್ಷಾನಂದ ಗುತ್ತೇದಾರ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ.ಹೀಗಾಗಿ ಕಾಂಗ್ರೆಸ್‌ನ 17 ಸದಸ್ಯರೊಂದಿಗೆ ಇಬ್ಬರು ಜೆಡಿಎಸ್‌ ಹಾಗೂ ಮೂವರು ಬಿಜೆಪಿ ಸದಸ್ಯರ ಬೆಂಬಲವಿದ್ದು, ಒಟ್ಟು 22 ಸದಸ್ಯ ಬಲದೊಂದಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ವಿರುದ್ಧದ ­ಅವಿಶ್ವಾಸ ಗೊತ್ತುವಳಿ ಯಶ ಕಾಣುವ ಹಾದಿಯಲ್ಲಿದೆ. ಏಕೈಕ ಪಕ್ಷೇತರ ಸದಸೆ್ಯ ಶೋಭಾ ಬಾಣಿ ಅವರು ಯಾವ ಪಕ್ಷ ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.ಆದರೆ, ಅಧಿಕಾರ ಹಿಡಿಯುವ ಪಕ್ಷಕ್ಕೆ ತಮ್ಮ ಮತ ಗ್ಯಾರಂಟಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷೆ ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದೇ ಹೇಳಲಾಗುತ್ತಿದೆ.ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿಯಲು ಜಿಲ್ಲಾ ಕಾಂಗ್ರೆಸ್‌ ಘಟಕದಲ್ಲಿ ಚಟುವಟಿಕೆಗಳು ಬಿರುಸಾಗಿ ನಡೆದಿವೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಾಗನಗೌಡ ಪಾಟೀಲ ಅವರು ಇದರ ನೇತೃತ್ವ ವಹಿಸಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry