ಬುಧವಾರ, ಜೂನ್ 23, 2021
22 °C

ಬಿಜೆಪಿಯಿಂದ ಜನಾಂಗೀಯ ದ್ವೇಷ: ಮೋಟಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಜಾತ್ಯತೀತ ರಾಷ್ಟ್ರ ಭಾರತ ದಲ್ಲಿ ಬಿಜೆಪಿ ಪಕ್ಷವು ಧರ್ಮದ ಆಧಾರ ದಲ್ಲಿ ದೇಶ ಕಟ್ಟುವ ಮಾತನಾಡುತ್ತಾ ಜನಾಂಗೀಯ ದ್ವೇಷ ಹರಡುವ ಕೆಲಸ ದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಕಿಡಿ ಕಾರಿದರು.ಪಟ್ಟಣದ ಬನಶಂಕರಿ ಕಲ್ಯಾಣಮಂಟಪ ದಲ್ಲಿ ಸೋಮವಾರ ಭಾರತ್‌ ನಿರ್ಮಾ ಣ್‌ ಯಾತ್ರಾ ಮತ್ತು ಕಾಂಗ್ರೆಸ್  ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಈ ಬಾರಿಯ ಲೋಕಸಭಾ ಚುನಾವಣೆ ಕಾರ್ಯಕರ್ತರಲ್ಲಿ ಹುರುಪು ಹುಮ್ಮ ಸ್ಸು ತುಂಬಿದ್ದು ಕಾಂಗ್ರೆಸ್‌ ಪಕ್ಷ ಅಧಿಕಾರ ದಲ್ಲಿದ್ದರೆ ಸಾಮಾಜಿಕ ಶತ್ರುಗಳಾದ ಬಡತನ, ಅನಕ್ಷರತೆ ಮತ್ತು ನಿರು ದ್ಯೋಗದ ನಿವಾರಣೆ ಬಗ್ಗೆ ಚಿಂತಿಸಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಮೋದಿಯಂತಹವರು ದೇಶದ ಪ್ರಧಾನಿ ಯಾದರೆ ಅಲ್ಪಸಂಖ್ಯಾತರು ಎಲ್ಲಿ ಹೋಗಬೇಕು ಎಂದರು.ಕಾಂಗ್ರೆಸ್‌ ಅಭ್ಯರ್ಥಿ ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, ದೇಶದ ರೈತರ ₨72ಸಾವಿರ ಕೋಟಿ ಸಾಲ ಮನ್ನಾ ಮಾಡಿದ, ರಾಜ್ಯದಲ್ಲಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದು ಳಿದ ವರ್ಗಗಳಿಗೆ ಸೇರಿದ ಜನರ ಸಾವಿ ರಾರು ಕೋಟಿ ರೂಪಾಯಿ ಸಾಲ ಮನ್ನಾ ಮತ್ತು ರಾಜ್ಯದ ಎಲ್ಲ ವರ್ಗದ ಜನತೆಗೆ ತಲುಪುವಂತಹ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್‌  ಜನಪರ ಕಾಳಜಿಗೆ ದ್ಯೋತಕ ವಾಗಿದ್ದು ಇತರೆ ಪಕ್ಷಗಳು ಇಂತಹ ಕಾರ್ಯ ಕ್ರಮ ಗಳನ್ನು ರೂಪಿಸುವ ಗೋಜಿಗೆ ಹೋಗದೆ ಅಭಿವೃದ್ಧಿ ರಾಜಕಾರಣ ಮಾಡದೆ ಸ್ವಹಿತದ ರಾಜಕಾರಣದಲ್ಲಿ ತೊಡಗು ತ್ತಾರೆ. ಸದಾಕಾಲ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವ ದೇವೇಗೌಡರು ಪ್ರಧಾನಿ ಹುದ್ದೆಗೇರಿದ್ದೇ ಕಾಂಗ್ರೆಸ್‌  ಬೆಂಬಲ ದಿಂದ ಎನ್ನುವುದನ್ನು ಮರೆಯಬಾರದು ಎಂದರು.ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ರಾಜ್ಯಸಭೆ ಮಾಜಿ ಸದಸ್ಯ ಎಚ್‌.ಕೆ. ಜವರೇಗೌಡ, ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಂ.ಆನಂದ್, ಮುಖಂಡರಾದ ಚಂದ್ರಕಲಾ, ಸಿ. ನಂಜಪ್ಪ, ಮೋಹನ್‌, ಎಂ.ಎಚ್‌. ಚಂದ್ರಪ್ಪ ಮಾತನಾಡಿದರು.

ಬೀರೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ.ವಿನಾಯಕ, ಜಿಲ್ಲಾ ಕಾರ್ಯ ದರ್ಶಿ ಮಹೇಶ್‌ ಒಡೆಯರ್‌, ಪುರಸಭೆ ಸದಸ್ಯರಾದ ಲೋಕೇಶ್‌, ಬಷೀರ್‌ ಸಾಬ್‌,ರವಿಕುಮಾರ್‌, ಜಯಣ್ಣ, ತಾ.ಪಂ ಸದಸ್ಯ ಪ್ರಭು ಕುಮಾರ್‌, ಲೋಕೇಶಪ್ಪ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.