ಬಿಜೆಪಿಯಿಂದ ಭ್ರಮನಿರಸನ: ಚಂದ್ರಪ್ಪ

7

ಬಿಜೆಪಿಯಿಂದ ಭ್ರಮನಿರಸನ: ಚಂದ್ರಪ್ಪ

Published:
Updated:

ಮಾಯಕೊಂಡ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯಿಂದ ಜನತೆಗೆ ಭ್ರಮನಿರಸನವಾಗಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹೂವಿನಮಡು ಚಂದ್ರಪ್ಪ ಕಿಡಿಕಾರಿದರು.ಇಲ್ಲಿನ ಸಮುದಾಯಭವನದಲ್ಲಿ ಭಾನುವಾರ ನಡೆದ ಜೆಡಿಎಸ್‌ನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಾತೀಯತೆ ಮತ್ತು ಭ್ರಷ್ಟಾಚಾರದಿಂದ ತುಂಬಿರುವ ಬಿಜೆಪಿ ಸರ್ಕಾರ ಶೀಘ್ರ ಪತನಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಂಡ ಜನಪರ ಕಾರ್ಯಗಳು ಜನತೆಯ ಮನದಲ್ಲಿ ಹಸಿರಾಗಿವೆ. ಜೆಡಿಎಸ್ ಪರವಾದ ಅಲೆ ರಾಜ್ಯಾದ್ಯಂತ ಬೀಸುತ್ತಿದ್ದು, ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದಾಸಕರಿಯಪ್ಪ ಮಾತನಾಡಿ, ಕಾರ್ಯಕರ್ತರು ಕುಮಾರಸ್ವಾಮಿ ಅವರ ಸಾಧನೆ ಜನರಿಗೆ ತಿಳಿಸಬೇಕು. ಅ. 18ರಂದು ಅದ್ದೂರಿ ಸಮಾವೇಶದ ಸಿದ್ಧತೆಗೆ ತೊಡಗಿಸಿಕೊಳ್ಳಬೇಕು ಎಂದರು.

ಪಕ್ಷದ ಮುಖಂಡ ಕೆ.ಜಿ.ಆರ್. ನಾಯ್ಕ ಮಾತನಾಡಿದರು.ಪಕ್ಷದ ಕಾರ್ಯದರ್ಶಿ ಗುಡ್ಡಪ್ಪ ಮಾತನಾಡಿದರು.

ಮಾಯಕೊಂಡ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತಪ್ಪ ಮತ್ತು ಹುಚ್ಚವ್ವನಹಳ್ಳಿ ಮೂರ್ತಿ ಮುಂತಾದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.ಪಕ್ಷದ ಮುಖಂಡ ಕುರ್ಕಿ ಕೊಟ್ರಪ್ಪ, ಷಫೀವುಲ್ಲಾ, ಕುರುಡಿ ಬಣಕಾರ್, ವಡ್ನಳ್ಳಿ ಸಿದ್ದೇಶ್, ಆರ್.ಜಿ,ಹಳ್ಳಿ ನಟರಾಜ್, ಕತ್ತಲಗೆರೆ ತಿಪ್ಪೇಶ್, ಕುಬೇರಪ್ಪ, ಮಂಜುಳಾ ಪ್ರಕಾಶ್, ಸುರೇಶ್, ಬಸವಾಪಟ್ಟಣ ಹೋಬಳಿ ಅಧ್ಯಕ್ಷ ಗಂಗಾಧರಪ್ಪ, ಕುಮಾರ ನಾಯ್ಕ, ಮಾಯಕೊಂಡದ ನಾಗೇಂದ್ರಪ್ಪ, ಸಿ.ಕೆ. ಚಂದ್ರಪ್ಪ, ರಾಘವೇಂದ್ರ, ಮಾಲತೇಶ, ರಾಮಣ್ಣ, ರಮೇಶ್ ಇದ್ದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry